alex Certify ರೈಲು ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ಗುಡ್ ನ್ಯೂಸ್: ಸಂಚಾರ ಸೇವೆ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ಗುಡ್ ನ್ಯೂಸ್: ಸಂಚಾರ ಸೇವೆ ವಿಸ್ತರಣೆ

ದಾವಣಗೆರೆ: ನೈರುತ್ಯ ರೈಲ್ವೆ ವಿಭಾಗವು ಹೌರಾ-ಮೈಸೂರು (08117) ಬೇಸಿಗೆ ವಿಶೇಷ ಸೂಪರ್ ಫಾಸ್ಟ್ ವೀಕ್ಲಿ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಮೇ 7 ರಿಂದ ಜೂನ್ 25 ರವರೆಗೆ ಹಾಗೂ ಮೈಸೂರು-ಹೌರಾ (08118) ರೈಲು ಸಂಚಾರ ಸೇವೆಯನ್ನು ಮೇ 9 ರಿಂದ ಜೂ. 27 ರವರೆಗೆ ವಿಸ್ತರಿಸಿದೆ.

ಯಶವಂತಪುರ-ಹೌರಾ(06597) ಬೇಸಿಗೆ ವಿಶೇಷ ಸೂಪರ್ ಫಾಸ್ಟ್ ವೀಕ್ಲಿ ರೈಲು ಸಂಚಾರವನ್ನು ಮೇ 13 ರಿಂದ ಜೂ. 24 ರವರೆಗೆ ಹಾಗೂ ಹೌರಾ-ಯಶವಂತಪುರ (06598) ರೈಲು ಸಂಚಾರ ಸೇವೆಯನ್ನು ಮೇ 18 ರಿಂದ ಜೂ. 29 ರವರೆಗೆ ವಿಸ್ತರಿಸಿದೆ.

ರೈಲು ಸಂಚಾರ ರದ್ದು ಮುಂದುವರಿಕೆ:

ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್-ಗದಗ ಎಕ್ಸ್ ಪ್ರೆಸ್(01139) ಜೂನ್ 30 ರವರೆಗೆ ಹಾಗೂ ಗದಗ-ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (01140) ರೈಲು ಸಂಚಾರ ರದ್ದು ಜುಲೈ 1 ರವರೆಗೆ ಮುಂದುವರೆಸಲಾಗಿದೆ.  ಈ ಮೊದಲು ಮೇ. 10 ರವರೆಗೆ ರೈಲು ಸಂಚಾರ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...