alex Certify ರೈಲು ಪ್ರಯಾಣಿಕರಿಗೆ ಶಾಕ್, ಅನೇಕ ರೈಲುಗಳ ಸಂಚಾರ ಸ್ಥಗಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣಿಕರಿಗೆ ಶಾಕ್, ಅನೇಕ ರೈಲುಗಳ ಸಂಚಾರ ಸ್ಥಗಿತ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಜನತಾ ಕರ್ಫ್ಯೂ ಜಾರಿಯಾಗಿ ಪ್ರಯಾಣಿಕರ ಕೊರತೆ ಕಾರಣಕ್ಕೆ ನೈರುತ್ಯ ರೈಲ್ವೇ ಅನೇಕ ರೈಲುಗಳ ಸಂಚಾರ ಸ್ಥಗಿತಗೊಳಿಸಿದೆ.

ಬೆಂಗಳೂರಿನಿಂದ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಜನ ತೆರಳಿದ್ದು, ಪ್ರಯಾಣಿಕರ ಕೊರತೆ ಕಾರಣಕ್ಕೆ 6 ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ಮಾಡಿದೆ.

ಮೇ 4 ರಿಂದ ಕೆಎಸ್ಆರ್ ಬೆಂಗಳೂರು -ಶಿವಮೊಗ್ಗ ಎಕ್ಸ್ ಪ್ರೆಸ್ ವಿಶೇಷ ರೈಲು, ಧಾರವಾಡ -ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್, ಯಶವಂತಪುರ -ಬೀದರ್ ಎಕ್ಸ್ ಪ್ರೆಸ್ ಸ್ಥಗಿತಗೊಳಿಸಲಾಗಿದೆ.

ಅದೇ ರೀತಿಯಿಂದ ಮೇ 5 ರಿಂದ ಕೆಎಸ್ಆರ್ ಬೆಂಗಳೂರು –ನಾಗರಕೋಯಿಲ್, ಯಶವಂತಪುರ –ಲಾತೂರ್, ಯಶವಂತಪುರ -ಕಣ್ಣೂರು ಎಕ್ಸ್ ಪ್ರೆಸ್ ವಿಶೇಷ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದ ನಂತರ ಸೇವೆ ಆರಂಭವಾಗಲಿದೆ.

ಇದರಿಂದಾಗಿ ರಾಜ್ಯದಲ್ಲಿ ಕರ್ಫ್ಯೂ ಕಾರಣ ಬಸ್ ಸಂಚಾರ ಸ್ಥಗಿತಗೊಂಡು ದೂರದ ಊರುಗಳಿಗೆ ತೆರಳಲು ರೈಲುಗಳನ್ನು ನಂಬಿಕೊಂಡಿದ್ದವರಿಗೆ ತೊಂದರೆಯಾಗಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...