alex Certify Shocking: ಅರೆಬೆಂದ ಮೀನು ಸೇವಿಸಿದ ಮಹಿಳೆಯ ಅಂಗಾಂಗಗಳೇ ನಿಷ್ಕ್ರಿಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಅರೆಬೆಂದ ಮೀನು ಸೇವಿಸಿದ ಮಹಿಳೆಯ ಅಂಗಾಂಗಗಳೇ ನಿಷ್ಕ್ರಿಯ…!

ಕಲುಷಿತ ಮೀನನ್ನು ಸೇವನೆ ಮಾಡಿದ ಮಹಿಳೆಯು ತನ್ನ ದೇಹದ ನಾಲ್ಕು ಅಂಗಗಳನ್ನೇ ಕಳೆದುಕೊಂಡಂತಹ ಘಟನೆಯೊಂದು ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದೆ. 40 ವರ್ಷದ ಲಾರಾ ಬರಾಜಾಸ್​ ಎಂಬವರು ಅರೆಬೆಂದ ಕಲುಷಿತ ಟಿಲಾಪಿಯಾ ಮೀನನ್ನು ಸೇವಿಸಿದ ಪರಿಣಾಮ ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾಗಿದ್ದಾರೆ.

ಆಸ್ಪತ್ರೆಯಲ್ಲಿ ಬರೋಬ್ಬರಿ ಒಂದು ತಿಂಗಳ ಶಸ್ತ್ರಚಿಕಿತ್ಸೆ ಬಳಿಕ ಆಕೆಯ ಜೀವವನ್ನು ಉಳಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಆದರೆ ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಆಕೆಯ ಕೆಲ ಅಂಗಗಳನ್ನು ಕತ್ತರಿಸಬೇಕಾಗಿ ಬಂತು. ಇದು ನಿಜಕ್ಕೂ ಒಂದು ಆಘಾತಕಾರಿ ಘಟನೆಯಾಗಿದೆ. ಸ್ವಲ್ಪ ಮೈಮರೆತರೂ ನಮ್ಮ ಜೀವನದಲ್ಲಿಯೂ ಇಂತಹ ಘಟನೆ ಸಂಭವಿಸಬಹುದು ಎಂದು ಬರಾಜಾಸ್​ ಸ್ನೇಹಿತೆ ಅನ್ನಾ ಮೆಸ್ಸಿನ್ನಾ ಹೇಳಿದ್ದಾರೆ.

ಸ್ಯಾನ್​ ಜೋಸ್​​ನ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿ ಮಾಡಿದ ಮೀನಿನಿಂದ ಬಜಾರಾಸ್​ ಮನೆಯಲ್ಲಿ ಅಡುಗೆ ಮಾಡಿದ್ದಾರೆ. ಇದನ್ನು ಸೇವಿಸಿದ ಕೆಲವೇ ಗಂಟೆಗಳಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಕೇವಲ ಉಸಿರಾಟವೊಂದನ್ನು ಬಿಟ್ಟರೆ ಅವರ ದೇಹದಲ್ಲಿ ಇನ್ಯಾವುದೇ ಚಲನೆ ಇರಲಿಲ್ಲ ಎಂದು ಮೆಸ್ಸಿನಾ ಹೇಳಿದ್ದಾರೆ.

ಅಲ್ಲದೇ ಅವರ ಪಾದ, ಬೆರಳುಗಳು ಹಾಗೂ ತುಟಿ ಕಪ್ಪು ಬಣ್ಣಕ್ಕೆ ತಿರುಗಿತ್ತು. ಅವರು ಸಂಪೂರ್ಣ ಕೋಮಾಗೆ ಜಾರಿದ್ದರು ಎನ್ನಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ, ಪ್ರತಿ ವರ್ಷ ಈ ರೀತಿಯ 100 ರಿಂದ 150 ಪ್ರಕರಣಗಳು ವರದಿಯಾಗುತ್ತದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...