alex Certify ದುರಂತ: ಲಿಫ್ಟ್‌ನಲ್ಲಿ ಆಟವಾಡುತ್ತಿದ್ದ ವೇಳೆ ಬಾಗಿಲಿನ ನಡುವೆ ಸಿಲುಕಿ ಒಂಬತ್ತು ವರ್ಷದ ಬಾಲಕ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುರಂತ: ಲಿಫ್ಟ್‌ನಲ್ಲಿ ಆಟವಾಡುತ್ತಿದ್ದ ವೇಳೆ ಬಾಗಿಲಿನ ನಡುವೆ ಸಿಲುಕಿ ಒಂಬತ್ತು ವರ್ಷದ ಬಾಲಕ ಸಾವು

ನಾಲ್ಕು ಮಹಡಿಯ ಕಟ್ಟಡವೊಂದರ ಎಲಿವೇಟರ್‌ ಹಾಗೂ ಶಾಫ್ಟ್‌ಗಳ ನಡುವೆ ಸಿಲುಕಿದ ಒಂಬತ್ತು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ದೆಹಲಿಯ ವಿಕಾಸ್‌ಪುರಿಯಲ್ಲಿ ಜರುಗಿದೆ.

ಈ ಘಟನೆ ಮಾರ್ಚ್ 24ರಂದು ಸಂಭವಿಸಿದ್ದು, ಲಾಂಡ್ರಿ ಕೆಲಸ ಮಾಡುವ ಜೋಡಿಯ ಮಗನಾದ ಆಶಿಶ್‌ ಈ ದುರ್ದೈವಿಯಾಗಿದ್ದಾನೆ.

ಕಟ್ಟಡದಲ್ಲಿರುವ ಮನೆಗಳಿಂದ ಬಟ್ಟೆಗಳನ್ನು ಸಂಗ್ರಹಿಸಲು ಹೊರಟ ತನ್ನ ತಾಯಿ ರೇಖಾರೊಂದಿಗೆ ಹೋದ ಆಶಿಶ್, ತನ್ನಮ್ಮ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋದರೆ, ತಾನು ಎಲಿವೇಟರ್‌ ಹಿಡಿದು ಆಟವಾಡಲು ಆರಂಭಿಸಿದೆ.

ತನ್ನ ಮಡದಿ ಬಟ್ಟೆಗಳನ್ನು ಸಂಗ್ರಹಿಸಿಕೊಂಡು ಬಂದರೂ ಮಗ ಮಾತ್ರ ಬರದೇ ಇದ್ದ ಕಾರಣ ತಿಳಿಯ ಹೊರಟ ರಮೇಶ್‌ ಕೂಡಲೇ ಕಟ್ಟಡದ ಸುತ್ತಲೂ ಆತನಿಗಾಗಿ ಹುಡುಕಾಡಿದ್ದಾರೆ.

ಬಾಲಕನ ಕಾಲುಗಳು ಲಿಫ್ಟ್‌ನ ಹೊರಗೆ ನೇತಾಡುತ್ತಿರುವುದನ್ನು ಲಿಫ್ಟ್‌ನ ಮರದ ಬಾಗಿಲಿಗೆ ಹಾಕಿದ್ದ ಗಾಜಿನಿಂದ ಕಂಡುಕೊಂಡಿದ್ದಾರೆ ರಮೇಶ್. ಕೂಡಲೇ ಅಲಾರ್ಮ್ ಕೂಗಿಸುವ ಮೂಲಕ ಕಟ್ಟಡದಲ್ಲಿದ್ದ ಎಲ್ಲರಿಗೂ ವಿಚಾರ ತಿಳಿಸಿದ್ದಾರೆ.

ತಾಂತ್ರಿಕ ದೋಷದ ಕಾರಣದಿಂದ ಎಲಿವೇಟರ್‌ನಲ್ಲಿ ಎಡವಟ್ಟಾಗಿರಬಹುದು ಎಂದು ಉಪ ಪೊಲೀಸ್ ಆಯುಕ್ತ ಘನ್‌ಶ್ಯಾಮ್ ಬನ್ಸಾಲ್ ಶಂಕಿಸಿದ್ದಾರೆ. ಬಾಲಕ ಲಿಫ್ಟ್‌ನ ಒಳಗೆ ಬರಲು ಯತ್ನಿಸುತ್ತಲೇ ಅದರ ಬಾಗಿಲು ಹಾಕಿಕೊಂಡು, ಎಲಿವೇಟರ್‌ ಹಾಗೂ ಶಾಫ್ಟ್‌ಗಳ ನಡುವೆ ಸಿಲುಕಿಕೊಂಡಿದ್ದಾನೆ ಎಂದು ಅಂದಾಜಿಸಲಾಗಿದೆ.

ಬಾಲಕನ ರಕ್ಷಣೆಗೆ ಪ್ರಯತ್ನಗಳನ್ನು ಮಾಡುವ ಹೊತ್ತಿಗಾಗಲೇ ಆತ ಸಿಕ್ಕಿಹಾಕಿಕೊಂಡಿದ್ದ ಸ್ಥಿತಿಯಲ್ಲೇ ಅರ್ಧ ಗಂಟೆ ಕಳೆದಾಗಿತ್ತು. ಬಾಲಕನನ್ನು ಕೊನೆಗೂ ಅಲ್ಲಿಂದ ಹೊರಗೆಳೆದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಅಷ್ಟು ಹೊತ್ತಿಗೆ ಮೃತಪಟ್ಟಿದ್ದ ಎಂದು ವೈದ್ಯರು ಘೋಷಿಸಿದ್ದಾರೆ.

ಯಂತ್ರಗಳು ನಿರ್ವಹಣೆ ವೇಳೆ ತೋರಿದ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗಿದ್ದಕ್ಕೆ ಕೆಲ ಅನಾಮಧೇಯ ವ್ಯಕ್ತಿಗಳ ವಿರುದ್ಧ ಐಪಿಸಿಯ ಸೆಕ್ಷನ್ 287 ಹಾಗೂ 304ಎ ಅಡಿ ವಿಕಾಸ್ಪುರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...