alex Certify ಹುಲಿ ರಸ್ತೆ ದಾಟಲು ಟ್ರಾಫಿಕ್‌ ನಿಲ್ಲಿಸಿದ ಪೊಲೀಸ್;‌ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿ ರಸ್ತೆ ದಾಟಲು ಟ್ರಾಫಿಕ್‌ ನಿಲ್ಲಿಸಿದ ಪೊಲೀಸ್;‌ ವಿಡಿಯೋ ವೈರಲ್

ಹುಲಿಯೊಂದು ರಾಜಗಾಂಭೀರ್ಯದಲ್ಲೆ ರಸ್ತೆ ದಾಟುವಾಗ ಅದಕ್ಕೆ ಅಡಚಣೆಯಾಗದಂತೆ ಪೊಲೀಸರು ಪ್ರಯಾಣಿಕರನ್ನು ತಡೆದು ನಿಲ್ಲಿಸಿದ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಐಎಫ್​ಎಸ್​ ಅಧಿಕಾರಿ ಪರ್ವೀನ್​ ಕಸ್ವಾನ್​ ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನೋಡಲು ಬಹಳ ಮುದವೆನಿಸುತ್ತದೆ.

ಸಂಚಾರಿ ಪೊಲೀಸ್​ ಸಿಬ್ಬಂದಿ ರಸ್ತೆಯ ಎರಡೂ ಬದಿಯ ಸಿಗ್ನಲ್​ನಲ್ಲಿ ಪ್ರಯಾಣಿಕರನ್ನು ನಿಲ್ಲಿಸಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆರಂಭದಲ್ಲಿ ಹುಲಿ ಹೆದ್ದಾರಿ ಬಳಿ ಕಾಣಿಸಿದೆ. ಬಳಿಕ ಅದನ್ನು ದಾಟಲು ಪ್ರಯತ್ನಿಸುತ್ತಿರುವುದನ್ನು ಪೊಲೀಸ್ ಗಮನಿಸಿದ್ದಾರೆ.

ನಂತರ ಅವರ ಸಕಾಲಿಕ ಮಧ್ಯಪ್ರವೇಶದಿಂದಾಗಿ ಹುಲಿ ರಸ್ತೆ ದಾಟಲು ಸಾಧ್ಯವಾಯಿತು. ಕ್ಲಿಪ್​ನ ಅತ್ಯಂತ ಅಚ್ಚರಿ ವಿಷಯ ಎಂದರೆ ಹುಲಿ ಶಾಂತವಾಗಿತ್ತು, ಎಲ್ಲಾ ವಾಹನ ಸವಾರರೂ ತಾಳ್ಮೆಯಿಂದ ಕಾಯುತ್ತಿದ್ದರು.

ವಿಡಿಯೋ ಎಲ್ಲಿ ಶೂಟ್​ ಮಾಡಿದ್ದೆಂದು ಗೊತ್ತಾಗಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ಗಳಿಸಿದೆ.

ಇದು ಬಹಳ ಅಪರೂಪದ ಸನ್ನಿವೇಶ. ಈ ಹುಲಿ ಮಾನವ ಉಪಸ್ಥಿತಿಯನ್ನು ಒಪ್ಪಿಕೊಂಡಿದೆಯೇ ಅಥವಾ ಹಸಿವಿನಿಂದಿರಲಿಲ್ಲವೇ? ಎಂದು ಒಬ್ಬರು ಕಾಮೆಂಟ್​ ಮಾಡಿದ್ದಾರೆ. ಹುಲಿ ಸುಲಭವಾಗಿ ಸಾಗಲು ಹಸಿರು ಕಾರಿಡಾರ್​ಗಳು ಬೇಕು ಎಂದು ಇನ್ನೊಬ್ಬರು ಕಾಮೆಂಟ್​ ಮಾಡಿದ್ದಾರ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...