alex Certify Watch Video | ಸೀರೆಯುಟ್ಟು ಫುಟ್ಬಾಲ್ ಆಡಿದ ಗ್ವಾಲಿಯರ್‌ ಮಹಿಳೆಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಸೀರೆಯುಟ್ಟು ಫುಟ್ಬಾಲ್ ಆಡಿದ ಗ್ವಾಲಿಯರ್‌ ಮಹಿಳೆಯರು

ಸೀರೆಯುಟ್ಟು ಫುಟ್ಬಾಲ್ ಆಡಲಾಗದು ಎಂದು ಯಾರು ಹೇಳಿದ್ದು ? ಸೀರೆ ಹಾಕಿಕೊಂಡರೆ ಅಷ್ಟು ಸಲೀಸಾಗಿ ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂಬ ಮಾತನ್ನು ಸುಳ್ಳಾಗಿಸಿದ್ದಾರೆ ಮಧ್ಯ ಪ್ರದೇಶದ ಗ್ವಾಲಿಯರ್‌ನ ಮಹಿಳೆಯರು.

ವೈರಲ್‌ ಆಗಿರುವ ಈ ವಿಡಿಯೋವನ್ನು ಪತ್ರಕರ್ತ ಬ್ರಜೇಶ್ ರಜ್ಪೂತ್‌ ಶೇರ್‌ ಮಾಡಿದ್ದು, 3.5 ಸಾವಿರ ವೀಕ್ಷಣೆಗಳನ್ನು ಕಂಡಿದೆ. “ಮಹಿಳೆಯರು ಮೆಸ್ಸಿಗಿಂತ ಕಡಿಮೆಯೇ…… ಸೀರೆಯುಟ್ಟ ಮಹಿಳೆಯರು ಗ್ವಾಲಿಯರ್‌ನಲ್ಲಿ ಫುಟ್ಬಾಲ್ ಆಡಿದ್ದಾರೆ,” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

’ಗೋಲ್ ಇನ್ ಸ್ಯಾರೀ’ ಹೆಸರಿನ ವಿಶಿಷ್ಟ ಕ್ರೀಡಾಕೂಟದ ವೇಳೆ ಈ ಪಂದ್ಯವನ್ನು ಆಡಲಾಗಿದೆ. ಈ ಕೂಟವನ್ನು ಗ್ವಾಲಿಯರ್‌ ನಗರ ಪಾಲಿಕೆ ಹಾಗೂ ಎನ್‌ಜಿಓ ಒಂದು ಸಹಯೋಗದಲ್ಲಿ ಆಯೋಜಿಸಿದ್ದವು. ಅಗ್ರ ಮೂರು ತಂಡಗಳು ಟ್ರೋಫಿಗಳನ್ನು ಸ್ವೀಕರಿಸಿದ್ದು, ಪ್ರತಿ ತಂಡದ ಸದಸ್ಯರಿಗೂ ವಿಶೇಷ ಉಡೊಗೊರೆಗಳನ್ನು ನೀಡಲಾಗಿದೆ.

20-72ರ ವಯೋಮಾನದ ಮಹಿಳೆಯರು ಕೂಟದಲ್ಲಿ ಭಾಗಿಯಾಗಿದ್ದರು. 72ರ ಹರೆಯದ ದಲ್ಜೀತ್‌ ಸಿಂಗ್ ಮಾನ್ ಈ ಫುಟ್ಬಾಲ್ ಟೂರ್ನಿಯಲ್ಲಿ ಭಾಗಿಯಾದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...