alex Certify ಕೆಲಸದ ಒತ್ತಡದಿಂದ ಉದ್ಯೋಗಿ ಆತ್ಮಹತ್ಯೆ, ಟೊಯೊಟಾ ಕಂಪನಿ ಅಧ್ಯಕ್ಷರಿಂದಲೇ ಕುಟುಂಬದ ಕ್ಷಮೆಯಾಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದ ಒತ್ತಡದಿಂದ ಉದ್ಯೋಗಿ ಆತ್ಮಹತ್ಯೆ, ಟೊಯೊಟಾ ಕಂಪನಿ ಅಧ್ಯಕ್ಷರಿಂದಲೇ ಕುಟುಂಬದ ಕ್ಷಮೆಯಾಚನೆ

ಜಪಾನ್‌ ಮೂಲದ ಆಟೋಮೊಬೈಲ್‌ ಕ್ಷೇತ್ರದ ದಿಗ್ಗಜ ಕಂಪನಿ ’’ಟೊಯೊಟಾ’’ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿಯೊಬ್ಬರು ಅತಿಯಾದ ಕೆಲಸದೊತ್ತಡದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಪಾನ್‌ನಲ್ಲಿ ಕಾರ್ಖಾನೆಯಲ್ಲೇ 28 ವರ್ಷದ ಎಂಜಿನಿಯರ್‌ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2010 ರಲ್ಲಿ ಈ ಘಟನೆ ಜರುಗಿದೆಯಾದರೂ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಗೊಯಾ ಹೈಕೋಟ್‌ನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇದಲ್ಲದೇ 2019 ರಲ್ಲಿ ಕೂಡ ಅತಿಯಾದ ಕೆಲಸದ ಹುಚ್ಚುತನ ವಾತಾವರಣವು ಉದ್ಯೋಗಿಯೊಬ್ಬರ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣವು ಕೋರ್ಟ್‌ ಮೆಟ್ಟಿಲೇರುತ್ತಿದ್ದಂತೆ ಟೊಯೊಟಾ ಕಂಪನಿ ಅಧ್ಯಕ್ಷ ಅಕಿಯೊ ಟೊಯೊಟಾ ಅವರು ಸಂತ್ರಸ್ತ ಕುಟುಂಬಕ್ಕೆ ಕ್ಷಮೆ ಯಾಚಿಸಿದ್ದಾರೆ. ಪ್ರಕರಣ ಸಂಬಂಧ ಸಂತ್ರಸ್ತರು ಕೋರ್ಟ್‌ನಲ್ಲಿ ಟೊಯೊಟಾದಿಂದ 80 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.

ಉಳಿತಾಯ ಮಾಡಿದ 40 ಲಕ್ಷ ರೂ. ಗಳನ್ನು ಬಡ ಮಕ್ಕಳಿಗೆ ನೀಡಿದ ಶಾಲಾ ಶಿಕ್ಷಕ

ಹಿರಿಯ ಉದ್ಯೋಗಿಗಳಿಂದ ಕಿರಿಯ ಉದ್ಯೋಗಿಗಳ ಮೇಲೆ ಹೆಚ್ಚು ಕೆಲಸ ಹೇರಲಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಆಂತರಿಕ ತನಿಖೆ ಕೂಡ ನಡೆಸುತ್ತೇವೆ. ಪ್ರತಿ ಉದ್ಯೋಗಿಯೂ ಭಯ ಮುಕ್ತ ವಾತಾವರಣದಲ್ಲಿ ಕೆಲಸ ಮಾಡುವಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಪ್ರಕಟಣೆಯಲ್ಲಿ ಟೊಯೊಟಾ ಕಂಪನಿ ಹೇಳಿದೆ.

ಮೂಲತಃ ಜಪಾನ್‌ ಪ್ರಜೆಗಳು ವಿಪರೀತವಾಗಿ ಕೆಲಸ ಮಾಡುವ ಉತ್ಕಟ ಇಚ್ಛೆಯವರು. ಅದರಿಂದ ಇಡೀ ದೇಶದಲ್ಲಿ ಕೌಟುಂಬಿಕ ವ್ಯವಸ್ಥೆ ಹದಗೆಟ್ಟಿದೆ. ಅನೇಕರು ಮದುವೆ ಇಲ್ಲದೆಯೇ, ದೇಶದ ಮುಂದಿನ ಜನಾಂಗದ ಕೊರತೆ ಎದುರಾಗಿದೆ. ಕೆಲಸದ ಒತ್ತಡ ಎನ್ನುವುದು ಜಪಾನ್‌ನಲ್ಲಿ ಸರ್ವವ್ಯಾಪಿಯಾಗಿರುವ ಕಾಯಿಲೆಯಂತೆ ಎಂದು ಅನೇಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...