alex Certify ಇಳುವರಿ ಹೆಚ್ಚಾದ ಕಾರಣಕ್ಕೆ ಟೊಮ್ಯಾಟೋ ಬೆಲೆ ಕುಸಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಳುವರಿ ಹೆಚ್ಚಾದ ಕಾರಣಕ್ಕೆ ಟೊಮ್ಯಾಟೋ ಬೆಲೆ ಕುಸಿತ

ಬಹಳಷ್ಟು ರಾಜ್ಯಗಳಲ್ಲಿ ಪೂರೈಕೆ ವಿಪರೀತವಾಗಿರುವ ನಡುವೆ ಟೊಮ್ಯಟೋ ಬೆಲೆ ಪಾತಾಳಕ್ಕಿಳಿದಿದ್ದು, 4-8 ರೂ./ಕೆಜಿ ಮಟ್ಟ ತಲುಪಿದೆ ಎಂದು ಸರ್ಕಾರಿ ದತ್ತಾಂಶಗಳು ತಿಳಿಸುತ್ತಿವೆ.

ಟೊಮ್ಯಾಟೋ ಬೆಳೆಯುವ 31 ಕೇಂದ್ರಗಳ ಪೈಕಿ 23 ಕೇಂದ್ರಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಬೆಲೆಯಲ್ಲಿ 50%ರಷ್ಟು ಇಳಿಕೆ ಕಂಡುಬಂದಿದೆ. 2021-22ರ ಖಾರಿಫ್‌ (ಬೇಸಿಗೆ) ಮಾಸದ ಟೊಮ್ಯಾಟೋ ಬೆಳೆಯನ್ನು ಸದ್ಯ ಕಟಾವು ಮಾಡಲಾಗುತ್ತಿದೆ.

ಹೆದ್ದಾರಿಯಲ್ಲಿ ಬರೋಬ್ಬರಿ 20 ಟನ್ ಟೊಮ್ಯಾಟೋ ಚೆಲ್ಲಾಪಿಲ್ಲಿ…!

ದೇಶದಲ್ಲೇ ಅತಿ ಹೆಚ್ಚು ಟೊಮ್ಯಾಟೋ ಬೆಳೆಯುವ ಮಧ್ಯ ಪ್ರದೇಶದ ದೇವಾಸ್‌ನಲ್ಲಿ 8 ರೂ./ಕಿಲೋ ಮಟ್ಟದಲ್ಲಿ ತರಕಾರಿ ಬಿಕರಿಯಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದೇ ಊರಿನಲ್ಲಿ ಟೊಮ್ಯಟೋ ಬೆಲೆಯು 11 ರೂ./ಕಿಲೋ ಇತ್ತು.

“ಅನುಕೂಲಕರ ವಾತಾವರಣದ ಕಾರಣ ಟೊಮ್ಯಾಟೋ ಇಳುವರಿ ಹೆಚ್ಚಾಗಿದ್ದು, ಒತ್ತಡದ ಕಾರಣದಿಂದ ಎಲ್ಲೆಡೆ ಬೆಲೆಗಳು ಕುಸಿದಿವೆ. ಬೆಲೆ ಹೆಚ್ಚಾಗಿರುವ ಬೀಜ ಬಿತ್ತುವ ರೈತರ ಮನಸ್ಥಿತಿಯೂ ಈ ಪರಿಸ್ಥಿತಿ ತಕ್ಕಮಟ್ಟಿಗೆ ಕಾರಣ ಎಂದು ರಾಷ್ಟ್ರೀಯ ತೋಟಗಾರಿಕಾ ಸಂಶೋಧನೆ ಹಾಗೂ ಅಭಿವೃದ್ಧಿ ಪ್ರತಿಷ್ಠಾನದ ಸಕ್ರಿಯ ನಿರ್ದೇಶಕ ಪಿ.ಕೆ. ಗುಪ್ತಾ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...