alex Certify ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಪ್ರಮೋದ್ ಭಗತ್ ಗೆ ತವರಿನಲ್ಲಿ ಅದ್ಧೂರಿ ಸ್ವಾಗತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಪ್ರಮೋದ್ ಭಗತ್ ಗೆ ತವರಿನಲ್ಲಿ ಅದ್ಧೂರಿ ಸ್ವಾಗತ

ಭುವನೇಶ್ವರ: ಟೋಕಿಯೋ ಪ್ಯಾರಾಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದ ಪ್ರಮೋದ್ ಭಗತ್ ಗೆ ತವರು ರಾಜ್ಯ ಒಡಿಶಾದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ.

ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಡಿಶಾ ಸರಕಾರವು ಅದ್ಧೂರಿ ಸ್ವಾಗತ ನೀಡಿದೆ.

ಚಿನ್ನದ ಪದಕ ವಿಜೇತ ಪ್ಯಾರಾಲಿಂಪಿಯನ್ ಪ್ರಮೋದ್ ಭಗತ್ ರನ್ನು ರಾಜ್ಯ ಕ್ರೀಡಾ ಸಚಿವೆ ತುಷಾರಕಾಂತಿ ಬೆಹೆರಾ ಹಾಗೂ ಕಾರ್ಯದರ್ಶಿ ಆರ್. ವಿನೀಲ್ ಕೃಷ್ಣ ಸ್ವಾಗತಿಸಿದ್ದಾರೆ.

‘ಶುಗರ್ ಫ್ಯಾಕ್ಟರಿ’ ಚಿತ್ರದ ‘ಹ್ಯಾಂಗೋವರ್’ ಲಿರಿಕಲ್ ಸಾಂಗ್ ರಿಲೀಸ್

ಭವ್ಯ ಸ್ವಾಗತ ನೀಡಿದ್ದಕ್ಕಾಗಿ ಜನರು ಹಾಗೂ ಸರಕಾರಕ್ಕೆ ಪ್ರಮೋದ್ ಭಗತ್ ಧನ್ಯವಾದ ಅರ್ಪಿಸಿದ್ದಾರೆ. ಹಾಗೂ ಈ ವರ್ಷದ ನುವಾಖೈ (ಪಶ್ಚಿಮ ಒಡಿಶಾದ ಹಬ್ಬ) ಅನ್ನು ಅತ್ಯಂತ ಸಂತೋಷದಿಂದ ಆಚರಿಸಲಾಗುವುದು ಎಂದು ಹೇಳಿದ್ದಾರೆ. ಮುಂಬರುವ 2024ರ ಪ್ಯಾರಿಸ್ ಪ್ಯಾರಲಿಂಪಿಕ್ಸ್ ನಲ್ಲಿ ಮತ್ತೊಂದು ಚಿನ್ನದ ಪದಕ ಗೆಲ್ಲುವುದು ತನ್ನ ಗುರಿ ಎಂದು ಹೇಳಿದ್ದಾರೆ.

ಚಿನ್ನ ಗೆದ್ದಿರುವ ಪ್ರಮೋದ್ ಭಗತ್ ಅವರಿಗೆ ಈಗಾಗಲೇ 6 ಕೋಟಿ ರೂ. ಹಾಗೂ ಗ್ರೂಪ್-ಎ ಹುದ್ದೆ ನೀಡುವುದಾಗಿ ಸರ್ಕಾರ ಘೋಷಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...