ಟೋಕಿಯೋ ಪ್ಯಾರಾಲಿಂಪಿಕ್ಸ್ 2020ಯಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದೆ. ಪುರುಷರ ಹೈಜಂಪ್ ವಿಭಾಗದಲ್ಲಿ ಭಾರತವು 2 ಪದಕಗಳನ್ನು ಗೆಲ್ಲುವ ಮೂಲಕ ಒಟ್ಟು 10 ಪದಕಗಳನ್ನು ತನ್ನದಾಗಿಸಿಕೊಂಡಂತಾಗಿದೆ.
ಹೈ ಜಂಪ್ ವಿಭಾಗದಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ ಪದಕವನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿಯ ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ತಂಗವೇಲು ಚಿನ್ನದ ಪದಕವನ್ನು ಸಂಪಾದಿಸಿದ್ದರು.
ತಂಗವೇಲುಗೆ ಕನ್ನಡಿಗ ಸತ್ಯನಾರಾಯಣ್ ಎಂಬವರು ಕೋಚ್ ಆಗಿದ್ದರು. ಶರದ್ ಕೂಡ ಪುರುಷರ ಹೈಜಂಪ್ನಲ್ಲಿ ಕಂಚಿನ ಪದಕವನ್ನು ಸಂಪಾದಿಸಿದ್ದಾರೆ.