alex Certify ಟೋಕಿಯೋ ಒಲಿಂಪಿಕ್ಸ್​: ಇಂದು ಟೋಕಿಯೋಗೆ ಭಾರತದ ಮೊದಲ ಬ್ಯಾಚ್​ ಪ್ರಯಾಣ; ಕ್ರೀಡಾ ಸಚಿವರಿಂದ ಔಪಚಾರಿಕ ಬೀಳ್ಕೊಡುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ಒಲಿಂಪಿಕ್ಸ್​: ಇಂದು ಟೋಕಿಯೋಗೆ ಭಾರತದ ಮೊದಲ ಬ್ಯಾಚ್​ ಪ್ರಯಾಣ; ಕ್ರೀಡಾ ಸಚಿವರಿಂದ ಔಪಚಾರಿಕ ಬೀಳ್ಕೊಡುಗೆ

ಟೋಕಿಯೋ ಒಲಿಂಪಿಕ್​ ಆರಂಭಕ್ಕೆ ದಿನಗಣನೆ ಬಾಕಿ ಇರುವಾಗಲೇ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ನಿಂದ ಹೊರಡಲಿರುವ ಮೊದಲ ಬ್ಯಾಚ್​​ನ ಭಾರತೀಯ ಕ್ರೀಡಾಪಟುಗಳಿಗೆ ಔಪಚಾರಿಕ ಬಿಳ್ಕೋಡುಗೆ ಸಮಾರಂಭ ಇಂದು ನಡೆಯಲಿದೆ.

ಒಟ್ಟು 88 ಮಂದಿ ಇರುವ ಬ್ಯಾಚ್​ ಇದಾಗಿದ್ದು ಇದರಲ್ಲಿ 54 ಮಂದಿ ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ಭಾರತೀಯ ಒಲಿಂಪಿಕ್​ ಅಸೋಸಿಯೇಷನ್​ ಪ್ರತಿನಿಧಿಗಳು ಸೇರಿದ್ದಾರೆ. ಈ ಸದಸ್ಯರಿಗೆ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ ಅನುರಾಗ್​ ಸಿಂಗ್​ ಠಾಕೂರ್​ ಔಪಚಾರಿಕೆ ಬೀಳ್ಕೋಡುಗೆ ನೀಡಲಿದ್ದಾರೆ. ಈ ಔಪಚಾರಿಕ ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ನಿಸಿತ್​ ಪ್ರಾಮಾಣಿಕ್​ ಕೂಡ ಭಾಗಿಯಾಲಿದ್ದಾರೆ.

ಆರ್ಚರಿ, ಹಾಕಿ, ಬ್ಯಾಡ್ಮಿಂಟನ್​, ಟೇಬಲ್​ ಟೆನ್ನಿಸ್​, ಜುಡೋ, ಜಿಮ್ನಾಸ್ಟಿಕ್ಸ್​ ಹಾಗೂ ವೇಟ್​ಲಿಫ್ಟಿಂಗ್​ ಎಂಬ 8 ಕ್ರೀಡೆಗಳ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಇಂದು ದೆಹಲಿಯಿಂದ ಟೋಕಿಯೋಗೆ ಹಾರಲಿದ್ದಾರೆ. ಈ ಬ್ಯಾಚ್​ನಲ್ಲಿ ಹಾಕಿ ಆಟಗಾರರ ಸಂಖ್ಯೆ ಹೆಚ್ಚಿದೆ.

ಆಟಗಾರರ ಸುರಕ್ಷತೆಯನ್ನ ಗಮನದಲ್ಲಿರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಪ್ರತಿಯೊಬ್ಬ ಗಣ್ಯ ವ್ಯಕ್ತಿಗಳಿಗೂ ಕೋವಿಡ್​ ಪರೀಕ್ಷೆ ಮಾಡಲಾಗಿದೆ. ನೆಗೆಟಿವ್​ ವರದಿ ಹೊಂದಿರುವವರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಾಮಾಜಿಕ ಅಂತರ, ಫೇಸ್​ ಮಾಸ್ಕ್​ ಸೇರಿದಂತೆ ಕೊರೊನಾ ಮಾರ್ಗಸೂಚಿಗಳನ್ನ ಈ ಕಾರ್ಯಕ್ರಮದಲ್ಲಿ ಪಾಲಿಸಲಾಗುತ್ತದೆ. ಭಾರತೀಯ ಶೂಟಿಂಗ್​ ತಂಡವು ಶನಿವಾರ ಟೋಕಿಯೋಗೆ ತೆರಳಿದೆ. ಈ ಬಾರಿ ಒಲಿಂಪಿಕ್​ನಲ್ಲಿ 127 ಭಾರತೀಯ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರೋದು ಸಹ ಒಂದು ದಾಖಲೆಯಾಗಿದೆ.

ಭಾರತೀಯ ಶೂಟಿಂಗ್​ ತಂಡದ ಸದಸ್ಯರ ಕೋವಿಡ್​ ಪರೀಕ್ಷೆ ನಡೆಸಲಾಗಿದ್ದು ವರದಿಗಾಗಿ ಕಾಯುತ್ತಿದ್ದಾರೆ. ಏಸ್​ ಇಂಡಿಯನ್ ವೇಟ್​ಲಿಫ್ಟರ್ ಸೈಕೋಮ್​ ಮೀರಾಬಾರಿ ಚಾನು ಸಹ ಶುಕ್ರವಾರ ಟೋಕಿಯೋಗೆ ಆಗಮಿಸಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...