alex Certify ಟೋಕಿಯೋ ಒಲಿಂಪಿಕ್ಸ್​ಗೆ ಡೆಡ್ಲಿ ವೈರಸ್​ ಕಾಟ: ಮತ್ತೆ 16 ಮಂದಿಗೆ ಕೊರೊನಾ ಪಾಸಿಟಿವ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೋಕಿಯೋ ಒಲಿಂಪಿಕ್ಸ್​ಗೆ ಡೆಡ್ಲಿ ವೈರಸ್​ ಕಾಟ: ಮತ್ತೆ 16 ಮಂದಿಗೆ ಕೊರೊನಾ ಪಾಸಿಟಿವ್​..!

ಟೋಕಿಯೋ ಒಲಿಂಪಿಕ್​ಗೆ ಸೇರಿದ್ದ ಇನ್ನೂ 16 ಮಂದಿ ಕೋವಿಡ್​ ಸೋಂಕಿಗೆ ಒಳಗಾಗಿದ್ದಾರೆ. ಅದೃಷ್ಟವಶಾತ್​ ಈ 16 ಮಂದಿಯಲ್ಲಿ ಯಾರೂ ಕ್ರೀಡಾಪಟುಗಳಲ್ಲ. ಹೊಸ ಕೇಸ್​ಗಳು ವರದಿಯಾದ ಬಳಿಕ ಈ ತಿಂಗಳಲ್ಲಿ ಸೋಂಕಿಗೆ ಒಳಗಾದ ಟೋಕಿಯೋ ಒಲಿಂಪಿಕ್ಸ್ ಸದಸ್ಯರ ಸಂಖ್ಯೆ 169 ಆಗಿದೆ.
ಕಳೆದ 24 ಗಂಟೆಗಳಲ್ಲಿ ಜಪಾನ್​ ರಾಜಧಾನಿ ಟೋಕಿಯೋದಲ್ಲಿ 2848 ಹೊಸ ಪ್ರಕರಣಗಳು ವರದಿಯಾಗಿದೆ.

ಈ ಹಿಂದೆ ವರದಿಯಾಗಿದ್ದ 2 ಪ್ರಕರಣಗಳು ಇದೀಗ ನೆಗೆಟಿವ್​ ಎಂದು ಸಾಬೀತಾಗಿದ್ದು, ಹೀಗಾಗಿ ಟೋಕಿಯೋ ಒಲಿಂಪಿಕ್​ ಸದಸ್ಯರ ಕೊರೊನಾ ಸೋಂಕು ಪಟ್ಟಿಯಲ್ಲಿ ಈ ಹೆಸರುಗಳನ್ನ ಅಳಿಸಲಾಗಿದೆ.

ಒಲಿಂಪಿಕ್​ ಆತಿಥೇಯ ಟೋಕಿಯೋದಲ್ಲಿ ಸೋಂಕು ಹೆಚ್ಚಾಗುತ್ತಿರೋದ್ರಿಂದ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಆದರೆ ಯಾವುದೇ ಒಲಿಂಪಿಕ್​ ಕ್ರೀಡಾಪಟುಗಳಲ್ಲಿ ಕೋವಿಡ್​ 19 ಸೋಂಕು ಕಂಡುಬಂದಿರುವ ಬಗ್ಗೆ ಸಂಘಟಕರು ವರದಿ ಮಾಡಿಲ್ಲ.

ಸೋಂಕಿತ 16 ಮಂದಿಯಲ್ಲಿ 9 ಮಂದಿ ಗುತ್ತಿಗೆದಾರರು, ನಾಲ್ವರು ಆಟ ಸಂಬಂಧಿ ಆಡಳಿತ ಮಂಡಳಿಗೆ ಸೇರಿದವರು, ಇಬ್ಬರು ಮಾಧ್ಯಮದವರು ಹಾಗೂ ಓರ್ವ ಸ್ವಯಂ ಸೇವಕ ಇದ್ದಾರೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ. ಇದರಲ್ಲಿ ಯಾರು ಕೂಡ ಕ್ರೀಡಾಗ್ರಾಮದಲ್ಲಿ ವಾಸ್ತವ್ಯ ಹೂಡಿಲ್ಲ ಎಂದು ಮಾಹಿತಿ ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...