ಟೋಕಿಯೋ ಒಲಿಂಪಿಕ್ ಉದ್ಘಾಟನಾ ಸಮಾರಂಭದ ಸಂಗೀತ ಸಂಯೋಜಕ ಕೈಗೋ ಒಯಾಮಾಡಾ ತಮ್ಮ ಹಳೆಯ ಸಂದರ್ಶನಗಳ ವಿಡಿಯೋಗಳು ವೈರಲ್ ಆದ ಬಳಿಕ ಕ್ಷಮೆ ಯಾಚಿಸಿದ್ದಾರೆ. ಈ ವಿಡಿಯೋಗಳಲ್ಲು ಅವರು ತಮ್ಮ ದಿವ್ಯಾಂಗ ಸಹಪಾಠಿಗಳನ್ನ ಬೆದರಿಸಿದ್ದರ ಬಗ್ಗೆ ಹೇಳಿಕೊಂಡಿದ್ದರು.
ಟೋಕಿಯೋ ಒಲಿಂಪಿಕ್ ಆರಂಭವಾಗುವ ಆರು ದಿನಗಳ ಮುಂಚೆ ಈ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಂಗೀತ ಸಂಯೋಜಕ ಕೈಗೋ ಒಯಾಮಾಡಾ ಇದ್ದಾರೆ. ಇವರು ಟೋಕಿಯೋ ಒಲಿಂಪಿಕ್ ಉದ್ಘಾಟನಾ ಸಮಾರಂಭದ ಸಂಯೋಜಕರಲ್ಲಿ ಒಬ್ಬರಾಗಿದ್ದಾರೆ. 1990ರ ದಶಕದಲ್ಲಿ ನಡೆದ ಸಂದರ್ಶನದ ತುಣುಕು ಇದಾಗಿದ್ದು ಇದರಲ್ಲಿ ಕೈಗೋ ಅಂಗವಿಕಲ ಸಹಪಾಠಿಗಳನ್ನ ಬೆದರಿಸಿದ್ರ ಬಗ್ಗೆ ಮಾತನ್ನಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿವಾದಕ್ಕೆ ಗ್ರಾಸವಾಯ್ತು. ಹಾಗೂ ಓಯಾಮಾಡಾ ನಡವಳಿಕ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ರು. ವಿವಾದ ತಾರಕಕ್ಕೇರುತ್ತಿದ್ದಂತೆಯೇ ಓಯಾಮಾಡಾ ತಮ್ಮ ಹೇಳಿಕೆ ಬಗ್ಗೆ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.