alex Certify ಕಾಯಿಲೆಯಿಂದ ಬಳಲುತ್ತಿರುವ ಕಂದಮ್ಮನಿಗೆ ಅಮೆರಿಕದಿಂದ ಸಿಗ್ತು ₹16 ಕೋಟಿ ಮೌಲ್ಯದ ಉಚಿತ ಚುಚ್ಚುಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಯಿಲೆಯಿಂದ ಬಳಲುತ್ತಿರುವ ಕಂದಮ್ಮನಿಗೆ ಅಮೆರಿಕದಿಂದ ಸಿಗ್ತು ₹16 ಕೋಟಿ ಮೌಲ್ಯದ ಉಚಿತ ಚುಚ್ಚುಮದ್ದು

ಮಹಾರಾಷ್ಟ್ರದ ನಾಸಿಕ್​ ನಿವಾಸಿಯಾದ ಶಿವರಾಜ್​ ದಾವರೆ ಎಂಬ ಕಂದಮ್ಮ ಸ್ಪೈನಲ್​ ಮಸ್ಕುಲಾರ್​ ಅಸ್ಟ್ರೋಪಿ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು ಮುಂಬರುವ ತನ್ನ 2ನೇ ವರ್ಷದ ಜನ್ಮ ದಿನದಂದು ಲಕ್ಕಿ ಡ್ರಾ ಮೂಲಕ ಅಮೆರಿಕದ ಸಂಸ್ಥೆಯಿಂದ 16 ಕೋಟಿ ರೂಪಾಯಿ ಮೌಲ್ಯದ ಚುಚ್ಚುಮದ್ದನ್ನು ಉಚಿತವಾಗಿ ಪಡೆಯಲಿದ್ದಾನೆ. ಹಾಗೂ ಈ ದುಬಾರಿ ಚುಚ್ಚುಮದ್ದನ್ನು ಉಚಿತವಾಗಿ ಪಡೆದ ಭಾರತದ ಮೊದಲ ಕಂದಮ್ಮ ಎನಿಸಲಿದ್ದಾನೆ.

ಶಿವರಾಜ್​​ ವಿರಳ ಅನುವಂಶಿಕ ಕಾಯಿಲೆಯಾದ ಸ್ಪೈನಲ್​ ಮಸ್ಕುಲಾರ್​ ಅಸ್ಟ್ರೊಪಿಯಿಂದ ಬಳಲುತ್ತಿದ್ದಾನೆ. ಈ ರೀತಿ ಕಾಯಿಲೆ ಇರುವ ಮಗುವು ಸೂಕ್ತ ಔಷಧಿಯನ್ನು ಪಡೆಯದೇ ಹೋದಲ್ಲಿ 2ವರ್ಷದೊಳಗಾಗಿ ಸಾವನ್ನಪ್ಪುತ್ತದೆ. ಈ ಮಾರಕ ಕಾಯಿಲೆಗೆ ಅಮೆರಿಕ ಮೂಲದ ಔಷಧಿ ಸಂಸ್ಥೆಯು 16 ಕೋಟಿ ರೂಪಾಯಿ ಮೌಲ್ಯದ ಇಂಜೆಕ್ಷನ್​ನ್ನು ಬಳಕೆ ಮಾಡಬೇಕಾಗುತ್ತದೆ.

ಮಧ್ಯಮ ವರ್ಗದ ವಿಶಾಲ್​ ದಾವರೆ ಹಾಗೂ ಕಿರಣ್​ ದಂಪತಿಯ ಪುತ್ರ ಶಿವರಾಜ್​​ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಲ್ಲಿನ ನರಶಾಸ್ತ್ರಜ್ಞರಾದ ಡಾ. ಬ್ರಜೇಶ್​ ಉದಾನಿ ಈ ಅಮೆರಿಕದ ಚುಚ್ಚುಮದ್ದಿನ ಬಗ್ಗೆ ಪೋಷಕರಿಗೆ ಮಾಹಿತಿಯನ್ನು ನೀಡಿದ್ದರು.

ನಾಸಿಕ್​ನಲ್ಲಿ ಫೋಟೋಕಾಪಿ ಶಾಪ್​​ ಹೊಂದಿರುವ ವಿಶಾಲ್​​ಗೆ ಈ ದುಬಾರಿ ಮೊತ್ತವನ್ನು ಹೊಂದಿಸುವುದು ಕನಸಿನ ಮಾತಾಗಿತ್ತು. ಕೊನೆಗೆ ವೈದ್ಯ ಉದಾನಿ ಸಲಹೆಯಂತೆ ಲಾಟರಿ ಖರೀದಿ ಮಾಡಿದ ವಿಶಾಲ್​ ಕೊನೆಗೂ ತಮ್ಮ ಪುತ್ರನಿಗೆ ಲಕ್ಕಿ ಡ್ರಾ ಮೂಲಕ ಉಚಿತ ಚುಚ್ಚು ಮದ್ದು ತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...