alex Certify 2 ವರ್ಷದ ಮಗನ ಕೈಗೆ ಫೋನ್ ಕೊಟ್ಟದ್ದೆ ತಪ್ಪಾಯ್ತು..! ಆರ್ಡರ್ ಮಾಡೇ ಬಿಟ್ಟ ರಾಶಿ ರಾಶಿ ಬರ್ಗರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ವರ್ಷದ ಮಗನ ಕೈಗೆ ಫೋನ್ ಕೊಟ್ಟದ್ದೆ ತಪ್ಪಾಯ್ತು..! ಆರ್ಡರ್ ಮಾಡೇ ಬಿಟ್ಟ ರಾಶಿ ರಾಶಿ ಬರ್ಗರ್

ಮಕ್ಕಳ ತುಂಟಾಟಗಳು ನೋಡೋದೆ ಚೆಂದ. ತೊದಲು ತೊದಲಾಗಿ ಮಾತಾಡ್ತಾ ಕೀಟಲೆ ಮಾಡ್ತಿದ್ರೆ, ಸಿಟ್ಟು ಬಂದ್ರೂ ಖುಷಿಯಾಗುತ್ತೆ. ಆದರೆ ಇವೇ ಮಕ್ಕಳು ಕೆಲವೊಮ್ಮೆ ಕೊಡೋ ಕಾಟ ದೊಡ್ಡವರನ್ನ ಇಕ್ಕಟ್ಟಿಗೆ ಸಿಗ್ಸುತ್ತೆ. ಅಂಥಹದ್ದೇ ಒಂದು ಅದ್ಭುತ ಅನುಭವ ಟೆಕ್ಸಾಸ್​ನಲ್ಲಿರೋ ಕೆಲ್ಸೆ ಬುರ್ಖಾಲ್ಟರ್ ಗೋಲ್ಡನ್ ಅವರಿಗಾಗಿದೆ.

ಮಕ್ಕಳಿಗೆ ಮೊಬೈಲ್ ಹುಚ್ಚು ಹೇಗಿರುತ್ತೆ ಅನ್ನೋದನ್ನ ನಾವೆಲ್ಲ ನೋಡಿರ್ತೆವೆ. ಊಟ ಮಾಡೋಲ್ಲ, ಹಠ ಮಾಡ್ತಿದ್ದಾರೆ ಅಂದ್ರೆ ಸಾಕು, ಪಾಲಕರು ಕೈಗೆ ಮೊಬೈಲ್ ಕೊಟ್ಟು ಬಿಡ್ತಾರೆ. ಮಕ್ಕಳು ಮೊಬೈಲ್ ನೋಡ್ತಾ ಇದ್ರೆ, ಇತ್ತ ದೊಡ್ಡವರು ತಮ್ಮ ಕೆಲಸ ಮುಗಿಸಿಕೊಂಡು ಬಿಡ್ತಾರೆ. ಆದರೆ ಇದೇ ಮೊಬೈಲ್​ನಿಂದ ಆಗೋ ಎಡವಟ್ಟು ಒಂದೆರಡಲ್ಲ.

ಆತ ಎರಡು ವರ್ಷದ ಪುಟ್ಟ ಪೋರ. ಆತನ ಹೆಸರು ಬ್ಯಾರೆಟ್. ಮನೆತುಂಬ ಓಡಾಡ್ಕೊಂಡು, ಆಟ ಆಡ್ಕೊಂಡು ಇದ್ದ. ಈತನ ಅಮ್ಮ ಆಗಾಗ ಮಗನಿಗೆ ಮೊಬೈಲ್ ಕೊಡೋಳು. ಆ ದಿನ ಕೂಡಾ ಮಗ ಮೊಬೈಲ್ ಕೇಳ್ತಿದ್ದಾನೆ ಅಂತ ಕೊಟ್ಟಳು. ಮೊಬೈಲ್ ಕೈಗೆ ಸಿಕ್ಕಿದ್ದೇ ತಡ. ಸ್ಥಳೀಯ ಮೆಕ್​ಡೊನಾಲ್ಡ್​​ ಔಟ್ಲೆಟ್​ನಿಂದ ಬರೋಬ್ಬರಿ 31 ಚೀಸ್ ಬರ್ಗರ್ ಬುಕ್ ಮಾಡಿದ್ದಾನೆ. ಅಷ್ಟೇ ಅಲ್ಲ ಜತೆಗೆ ಭರ್ಜರಿ ಟಿಪ್ ಕೂಡಾ ಆನ್​ಲೈನ್​ನಲ್ಲಿ ಪೇ ಮಾಡಿದ್ದಾನೆ.

ಬಿಜೆಪಿ, RSS ವಿರುದ್ಧ ಕಿಡಿಕಾರಿದ ಅಖಿಲೇಶ್ ಯಾದವ್ ಹಿಂದೂ ದೇಗುಲಗಳ ಬಗ್ಗೆ ಲೇವಡಿ, ಬಿಜೆಪಿ ಆಕ್ರೋಶ

ಕೆಲ್ಸೆ ಬುರ್ಖಾಲ್ಟರ್ ಗೋಲ್ಡನ್ ಅವರು ತಮಗಾದ ಫನ್ನಿ ಹಾಗೂ ಅಷ್ಟೆ ಕಾಸ್ಟ್ಲಿ ಅನುಭವವನ್ನ ಫೇಸ್​ಬುಕ್​ನಲ್ಲಿ ಶೇರ್​ ಮಾಡ್ಕೊಂಡಿದ್ದಾರೆ. ಮಗ ಬ್ಯಾರೆಟ್ ತನ್ನ ಡೋರ್ ಡ್ಯಾಶ್ ಅಪ್ಲಿಕೇಶನ್ ಬಳಸಿಕೊಂಡು ಆರ್ಡರ್ ಮಾಡಿರೋ ಬಗೆಯನ್ನ ಬರೆದುಕೊಂಡಿದ್ದಾರೆ. ಮಗನ ಜೊತೆಗೆ ಬರ್ಗರ್ ರಾಶಿ ಮುಂದೆ ಕೂತಿರೋ ಫೋಟೋ ಪೋಸ್ಟ್ ಹಾಕಿ ತಮ್ಮ ಎಕ್ಸ್​ಪಿರಿಯನ್ಸ್​ ಹೇಳಿಕೊಂಡಿದ್ದಾರೆ.

ನನ್ನ ಬಳಿ ಈಗ ಮೆಕ್​ಡೊನಾಲ್ಡ್​ನ 31 ಚೀಸ್ ಬರ್ಗರ್​ಗಳಿವೆ, ಯಾರಾದರೂ ಆಸಕ್ತಿ ಇದ್ದಲ್ಲಿ ಹೇಳಿ. ನಿಮಗೆ ಇದು ಫ್ರೀ. ನನ್ನ ಎರಡು ವರ್ಷದ ಮಗ ಮೊಬೈಲ್ ಹಿಡಿದುಕೊಂಡು ಫೋಟೋ ತೆಗೆದುಕೊಳ್ಳುತ್ತಿದ್ದಾನೆ ಅಂತ ನಾನು ಭಾವಿಸಿದ್ದೆ. ಆದರೆ ಆತ ಡೋರ್ಡ್ಯಾಶ್ ಆ್ಯಪ್​​ ಬಳಸಿ 31 ಬರ್ಗರ್ ಆರ್ಡರ್ ಮಾಡಿದ್ದಾನೆ. ಈ ಬರ್ಗರ್ ಮನೆಗೆ ಡಿಲೆವರಿ ಆದಾಗಲೇ ಗೊತ್ತಾಗಿದ್ದು, ನನ್ನ ಮಗ ಮಾಡಿದ್ದ ಕೆಲಸ ಏನು ಅಂತ. ಹೀಗೆ ಬರೆದುಕೊಂಡಿದ್ದಾರೆ ಕೆಲ್ಸೆ.

ಈ ಘಟನೆ ಫನ್ನಿ ಆಗಿರಬಹುದು. ಆದರೆ ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಆಗೋ ಅವಾಂತರಗಳು ಏನೇನು ಇರಬಹುದು ಅನ್ನೋದಕ್ಕೆ ಇದು ಬೆಸ್ಟ್ ಎಗ್ಸಾಂಪಲ್. ಅಷ್ಟೇ ಅಲ್ಲ ಮೊಬೈಲ್ ಅತಿಬಳಕೆಯಿಂದ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತೆ ಅನ್ನೋದನ್ನ ಪಾಲಕರು ಮರೆಯಕೂಡದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...