alex Certify ಜಿರಾಫೆ ತುಳಿತಕ್ಕೆ ಒಳಗಾಗಿ 16 ತಿಂಗಳ ಕಂದಮ್ಮನ ಸಾವು; ತಾಯಿಗೆ ಗಂಭೀರ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿರಾಫೆ ತುಳಿತಕ್ಕೆ ಒಳಗಾಗಿ 16 ತಿಂಗಳ ಕಂದಮ್ಮನ ಸಾವು; ತಾಯಿಗೆ ಗಂಭೀರ ಗಾಯ

ಡರ್ಬನ್‌ (ಆಫ್ರಿಕಾ): ವಿಶ್ವದ ಅತಿ ಎತ್ತರದ ಸಸ್ತನಿ ಎಂದೇ ಪ್ರಸಿದ್ಧಿ ಪಡೆದಿರುವ ಜಿರಾಫೆಯನ್ನು ನೋಡಲು ಹೋದ ಪುಟ್ಟ ಬಾಲಕಿಯೊಬ್ಬಳು ಅದರ ತುಳಿತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ದಕ್ಷಿಣ ಆಫ್ರಿಕಾದ ಪೂರ್ವ ಪ್ರದೇಶದಲ್ಲಿ ನಡೆದಿದೆ.

16 ತಿಂಗಳ ಪುಟ್ಟ ಮಗು ಸಾವಿಗೀಡಾಗಿದೆ. ಡರ್ಬನ್‌ನ ಈಶಾನ್ಯದಲ್ಲಿರುವ ಬಂದರು ನಗರದಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿಯ ಹ್ಲುಹ್ಲುವೆ ಪ್ರದೇಶದ ಕುಲೆನಿ ಫಾರ್ಮ್‌ನಲ್ಲಿ ತಾಯಿ, ಮಗುವಿನ ಜತೆ ಬಂದಾಗ ಘಟನೆ ಸಂಭವಿಸಿದೆ. ಏಕಾಏಕಿ ಜಿರಾಫೆ ಇವರ ಮೇಲೆ ದಾಳಿ ಮಾಡಿದೆ. ತಾಯಿಗೂ ಕೂಡ ಗಂಭೀರ ಗಾಯಗಳಾಗಿದ್ದು, ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಬಾಲಕಿ ಜಿರಾಫೆಯ ತುಳಿತಕ್ಕೆ ಒಳಗಾದ ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಪ್ರಯೋಜನ ಆಗಲಿಲ್ಲ. ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...