alex Certify ಮೊದಲ ಹೆಜ್ಜೆ ಇಡುವಾಗಲೇ ಡಾನ್ಸ್​ ಮಾಡಿದ ಕಂದಮ್ಮ: ಕ್ಯೂಟ್​ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಹೆಜ್ಜೆ ಇಡುವಾಗಲೇ ಡಾನ್ಸ್​ ಮಾಡಿದ ಕಂದಮ್ಮ: ಕ್ಯೂಟ್​ ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಚಿಕ್ಕಮಕ್ಕಳ ವಿಡಿಯೋ ನೋಡುವುದೇ ಚೆಂದ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಅಂಬೆಗಾಲಿಡುವ ಮಗುವೊಂದು ತನ್ನ ಮೊದಲ ಹೆಜ್ಜೆಗಳನ್ನು ಇಡುವ ಸಮಯವು ಅದ್ಭುತವಾಗಿರುತ್ತದೆ. ಆದರೆ ಇಲ್ಲೊಬ್ಬ ಪುಟಾಣಿ ಹೆಜ್ಜೆ ಇಡುವ ಬದಲು ನೃತ್ಯ ಮಾಡಲು ಪ್ರಾರಂಭಿಸಿದ್ದಾನೆ. ಇದರ ಕ್ಯೂಟ್​ ವಿಡಿಯೋ ವೈರಲ್​ ಆಗಿದೆ.

ಪತ್ರಕರ್ತೆ ಮಾರಿಯಾ ಶ್ರೀವರ್ ಇದನ್ನು ಶೇರ್ ಮಾಡಿದ್ದಾರೆ. ಈ ಕ್ಯೂಟ್​ ವಿಡಿಯೋ ಇದಾಗಲೇ ಐದು ಮಿಲಿಯನ್​ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಮಗು ತನ್ನ ಮೊದಲ ಹೆಜ್ಜೆಗಳನ್ನು ಇಡುವುದನ್ನು ನೀವು ನೋಡಬಹುದು. ಹಿನ್ನಲೆಯಲ್ಲಿ ಸಂಗೀತ ಪ್ಲೇ ಆಗುತ್ತಿದೆ. ಈ ಸಂಗೀತ ಕೇಳಿ ಮಗುವಿಗೆ ಸ್ಫೂರ್ತಿ ಬಂದ ಹಾಗಿದೆ. ಆದ್ದರಿಂದ ಹೆಜ್ಜೆ ಇಡುವ ಬದಲು ಡಾನ್ಸ್​ ಮಾಡಿದ್ದಾನೆ. ಈ ಕ್ಷಣವನ್ನು ರೆಕಾರ್ಡಿಂಗ್ ಮಾಡುತ್ತಿರುವ ಅವರ ಕುಟುಂಬಕ್ಕೂ ಇದು ಅಚ್ಚರಿ ತಂದಿದೆ. ಹೆಜ್ಜೆ ಇಡುತ್ತಾನೆ ಎಂದುಕೊಂಡರೆ ಡಾನ್ಸ್​ ಮಾಡಿರುವುದಾಗಿ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...