alex Certify ಸಾರ್ವಜನಿಕರ ಗಮನಕ್ಕೆ : ʻLPG ಗ್ಯಾಸ್ ಸಿಲಿಂಡರ್ –ಆಧಾರ್ʼ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕ ನಿಗಧಿಪಡಿಸಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರ ಗಮನಕ್ಕೆ : ʻLPG ಗ್ಯಾಸ್ ಸಿಲಿಂಡರ್ –ಆಧಾರ್ʼ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕ ನಿಗಧಿಪಡಿಸಿಲ್ಲ

ಬೆಂಗಳೂರು : ಅಡುಗೆ ಅನಿಲ ಸಂಪರ್ಕ ಹೊಂದಿರುವವರು ಆಧಾರ್ ಇ-ಕೆವೈಸಿ ಮಾಡಿಸಲು ಅಂತಿಮ ದಿನಾಂಕವನ್ನು ಕೇಂದ್ರ ಸರ್ಕಾರವು ನಿಗಧಿಪಡಿಸಿರುವುದಿಲ್ಲ. ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಆಧಾರ್ ಇ-ಕೆವೈಸಿ ಮಾಡಿಸಬಹುದಾಗಿದ್ದು, ಸಾರ್ವಜನಿಕರು ಆತಂಕದಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ.

ಆದ್ದರಿಂದ ಅನಾವಶ್ಯಕವಾಗಿ ಗೊಂದಲ ಅಥವಾ ತಪ್ಪು ಮಾಹಿತಿಯಿಂದ ಗ್ಯಾಸ್ ಏಜೆನ್ಸಿಗಳ ಬಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿರುವುದಿಲ್ಲ ಹಾಗೂ ಸಿಲಿಂಡರ್‍ನ್ನು ಮನೆಗೆ ಡೆಲಿವರಿ ಪಡೆಯುವ ವೇಳೆಯಲ್ಲಿ ಕೂಡ ಇ-ಕೆವೈಸಿ ಮಾಡಿಸಲು ಅವಕಾಶವಿರುತ್ತದೆ. ಅಲ್ಲದೇ ಹೆಲೋ ಬಿಪಿಸಿಎಲ್, ಇಂಡಿಯನ್ ಆಯ್ಲ್ ಒನ್ ಮತ್ತು ವಿಟ್ರನ್ ಹೆಚ್‍ಪಿ ಗ್ಯಾಸ್ ಈ ಮೊಬೈಲ್ ಆಪ್‍ಗಳ ಮೂಲಕ ಇ-ಕೆವೈಸಿ ಮಾಡಿಸಬಹುದಾಗಿದೆ ಎಂದು ಆಹಾರ, ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಉ ಉಪನಿರ್ದೇಶಕರಾದ ಅವಿನ್ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...