alex Certify ರೆಸ್ಟೋರೆಂಟ್‌ ಗಳಲ್ಲಿ ʼಸೇವಾ ಶುಲ್ಕʼ; ಕೇಂದ್ರದಿಂದ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೆಸ್ಟೋರೆಂಟ್‌ ಗಳಲ್ಲಿ ʼಸೇವಾ ಶುಲ್ಕʼ; ಕೇಂದ್ರದಿಂದ ಮಹತ್ವದ ಆದೇಶ

ಬಿಲ್‌ಗಳ ಮೇಲೆ ಸೇವಾ ಶುಲ್ಕ ವಿಧಿಸದಂತೆ ಕೇಂದ್ರ ಸರ್ಕಾರ ಗುರುವಾರ ರೆಸ್ಟೋರೆಂಟ್‌ಗಳಿಗೆ ನಿರ್ದೇಶನ ನೀಡಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯವು ಸೇವಾ ಶುಲ್ಕವನ್ನು ವಿಧಿಸುವುದು ಕಾನೂನುಬಾಹಿರವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದು, ಶೀಘ್ರದಲ್ಲೇ ಕಾನೂನು ಚೌಕಟ್ಟನ್ನು ತರಲು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದೆ.

ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ರೆಸ್ಟೋರೆಂಟ್‌ಗಳು ಬಿಲ್‌ಗಳ ಮೇಲೆ ಸೇವಾ ಶುಲ್ಕವನ್ನು ವಿಧಿಸುವುದನ್ನು ತಡೆಯಲು ಸಚಿವಾಲಯವು ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ಗ್ರಾಹಕರ ದೂರುಗಳಿಗೆ ಪ್ರತಿಕ್ರಿಯೆಯಾಗಿ, ಗ್ರಾಹಕ ವ್ಯವಹಾರಗಳ ಇಲಾಖೆ ಗುರುವಾರ ಹಾಸ್ಪಿಟಾಲಿಟಿ ಇಂಡಸ್ಟ್ರಿ ಅಸೋಸಿಯೇಶನ್ ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ ಜತೆಗೆ ರೆಸ್ಟೋರೆಂಟ್ ಬಿಲ್‌ಗಳಲ್ಲಿನ ಸೇವಾ ಶುಲ್ಕದ ಸಮಸ್ಯೆಯನ್ನು ಚರ್ಚಿಸಲು ಸಭೆಯನ್ನು ನಡೆಸಿತು.

ದೇಶದ ಮೊದಲ ಡೀಲಕ್ಸ್‌ ರೈಲು ʼಡೆಕ್ಕನ್ ಕ್ವೀನ್‌ʼ ಗೆ ಈಗ 92 ವರ್ಷ

ಈ ಮಧ್ಯೆ, ರೆಸ್ಟೋರೆಂಟ್ ಸೇವಾ ಶುಲ್ಕವನ್ನು ಸಂಗ್ರಹಿಸುವುದು ಕಾನೂನುಬಾಹಿರವಲ್ಲ ಅಥವಾ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ. ಗ್ರಾಹಕರು ಸ್ವಯಂ ಪ್ರೇರಿತವಾಗಿ ಸೇವಾ ಶುಲ್ಕ ಪಾವತಿಸಬಹುದು. ಅದು ಅವರ ವಿವೇಚನೆಗೆ ಬಿಟ್ಟದ್ದು. ರೆಸ್ಟೋರೆಂಟ್‌ಗಳನ್ನು ಗ್ರಾಹಕರಿಂದ ಬಲವಂತವಾಗಿ ಅದನ್ನು ವಸೂಲಿ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಕಳೆದ ತಿಂಗಳು ಹೇಳಿತ್ತು.

ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, ಭಾರತೀಯ ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್ (ಎನ್‌ಆರ್‌ಎಐ) ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ರೆಸ್ಟೋರೆಂಟ್‌ಗಳು ಪೂರ್ವನಿಯೋಜಿತವಾಗಿ ಗ್ರಾಹಕರಿಂದ ಸೇವಾ ಶುಲ್ಕವನ್ನು ಸಂಗ್ರಹಿಸುತ್ತಿವೆ. ಅಂತಹ ಯಾವುದೇ ಶುಲ್ಕವು ಸ್ವಯಂಪ್ರೇರಿತ ಮತ್ತು ಗ್ರಾಹಕರ ವಿವೇಚನೆಯಿಂದ ಮತ್ತು ಕಾನೂನಿನ ಪ್ರಕಾರ ಕಡ್ಡಾಯವಲ್ಲ ಎಂದು ಗಮನಸೆಳೆದಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...