alex Certify ಕ್ಯಾನೆ​ ಫಿಲಂ ಫೆಸ್ಟಿವಲ್​ ಪ್ರಶಸ್ತಿ ಪ್ರಕಟ: ಇಲ್ಲಿದೆ ವಿಜೇತರ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನೆ​ ಫಿಲಂ ಫೆಸ್ಟಿವಲ್​ ಪ್ರಶಸ್ತಿ ಪ್ರಕಟ: ಇಲ್ಲಿದೆ ವಿಜೇತರ ಪಟ್ಟಿ

2021ನೇ ಸಾಲಿನ ಪ್ರತಿಷ್ಟಿತ ಕ್ಯಾನೆ​ ಫಿಲಂ ಫೆಸ್ಟಿವಲ್​​ ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ಅಂತ್ಯ ಕಂಡಿದೆ. ಈ ವರ್ಷದ ಸ್ಪರ್ಧೆಯ ತೀರ್ಪುಗಾರರು ಪ್ರಶಸ್ತಿ ವಿಜೇತ ಸಿನಿಮಾ ಹಾಗೂ ಪ್ರದರ್ಶನಗಳ ಹೆಸರನ್ನ ಘೋಷಣೆ ಮಾಡಿದ್ರು.

ಅಮೆರಿಕನ್​ ಸಿನಿಮಾ ನಿರ್ದೇಶಕ ಸ್ಪೈಕ್​ ಲೀ ಅಧ್ಯಕ್ಷತೆಯಲ್ಲಿ ತೀರ್ಪುಗಾರರಾದ ನಿರ್ದೇಶಕ ಮತಿಇ ಡಯೋಪ್​, ಗಾಯಕಿ ಹಾಗೂ ಗೀತರಚನೆಕಾರ್ತಿ ಮೈಲೀನ್​ ಫಾರ್ಮರ್​, ನಟಿ ಹಾಗೂ ನಿರ್ದೇಶಕಿ ಮ್ಯಾಗಿ ಗಿಲ್ಹೇನಾರ್​, ಬರಹಗಾರ್ತಿ ಹಾಗೂ ನಿರ್ದೇಶಕಿ ಜೆಸ್ಸಿಕಾ ಹೌಸ್ನರ್​, ನಟಿ/ನಿರ್ದೇಶಕಿ ಮೆಲಾನಿ ಲಾರೆಂಟ್​, ನಿರ್ದೇಶಕ ಕ್ಲೆಬರ್​ ಮೆಂಡೊನಾ ಫಿಲ್ಹೋ, ನಟಿ ತಹರ್​ ರಹೀಮ್​ ಹಾಗೂ ಮತ್ತೋರ್ವ ನಟ ಸಾಂಗ್​ ಕಾಂಗ್​ ಹೋ ವಿಜೇತರ ಹೆಸರನ್ನ ಘೋಷಣೆ ಮಾಡಿದ್ರು.

ಕ್ಯಾನೆ​​​ ಫಿಲಂ ಫೆಸ್ಟಿವಲ್​​ನ ಅತ್ಯುನ್ನತ ಪ್ರಶಸ್ತಿಯಾದ ಪಾಮ್​ ಡಿ ಓರ್​​ ನಟಿ ಜೂಲಿಯಾ ಡುಕೋರ್ನೌ ಅವರಿಗೆ ಸಂದಿದೆ. ಟೈಟೇನ್​​ ಸಿನಿಮಾದ ನಿರ್ದೇಶನದ ಮೂಲಕ ಜೂಲಿಯಾ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಮೂಲಕ ಕ್ಯಾನೆ​ ಫಿಲಂ ಫೆಸ್ಟಿವಲ್​​ನಲ್ಲಿ ಈ ಅತ್ಯುನ್ನತ ಪ್ರಶಸ್ತಿಯನ್ನ ಗೆದ್ದ ವಿಶ್ವದ ಎರಡನೇ ಮಹಿಳೆ ಎನಿಸಿದ್ದಾರೆ. 1993ರಲ್ಲಿ ದಿ ಪಿಯಾನೋ ಸಿನಿಮಾಗಾಗಿ ಜೇನ್​ ಕ್ಯಾಂಪಿಯನ್​ ಈ ಪ್ರಶಸ್ತಿಯನ್ನ ಮೊಟ್ಟ ಮೊದಲ ಬಾರಿಗೆ ಪಡೆದಿದ್ದರು.

ಕೊರೊನಾದಿಂದಾಗಿ ಕಳೆದ ವರ್ಷ ಈ ಅತ್ಯುನ್ನತ ಫಿಲಂ ಫೆಸ್ಟಿವಲ್​ ರದ್ದಾಗಿತ್ತು. ಹೀಗಾಗಿ 2019ರಲ್ಲಿ ಪ್ಯಾರಸೈಟ್​ ಸಿನಿಮಾಗಾಗಿ ನಿರ್ದೇಶಕ ಬಾಂಗ್ ಜಂಗ್ ಮುಡಿಗೆ ಪಾಮ್​ ಡಿ ಓರ್​​ ಸಂದ ಬಳಿಕ ಈ ಪ್ರಶಸ್ತಿ ಕಳೆದೊಂದು ವರ್ಷದಿಂದ ಯಾರ ಮಡಿಲಿಗೂ ಸೇರಿರಲಿಲ್ಲ. ಇದೀಗ ಈ ಅತ್ಯುನ್ನತ ಪ್ರಶಸ್ತಿಯು ಮಹಿಳಾ ನಿರ್ದೇಶಕಿಯ ಮುಡಿಗೇರಿದೆ.

ಕ್ಯಾನೆ ಫೆಸ್ಟಿವಲ್​ 2021ನೇ ಸಾಲಿನ ಪ್ರಶಸ್ತಿ ಹಾಗೂ ವಿಜೇತರ ಪಟ್ಟಿ ಇಲ್ಲಿದೆ:

ಪಾಮ್​ ಡಿ ಓರ್​ : ಟೈಟೇನ್​

ಗ್ರ್ಯಾಂಡ್​ ಫ್ರಿಕ್ಸ್​ (ಡ್ರಾ) : ಎ ಹಿರೋ ಹಾಗೂ ಕಂಪಾರ್ಟ್​ಮೆಂಟ್​ ನಂ.6

ಜ್ಯೂರಿ ಫ್ರೈಜ್​ (ಡ್ರಾ) : ಅಹೆಡ್ಸ್​ ನೀ ಹಾಗೂ ಮೆಮೋರಿಯಾ

ಅತ್ಯುತ್ತಮ ನಟಿ : ರೆನೇಟ್​ ರೈನ್ಸೆ (ದಿ ವರ್ಸ್ಟ್​ ಪರ್ಸನ್​ ಇನ್​ ದಿ ವರ್ಲ್ಡ್​)

ಅತ್ಯುತ್ತಮ ನಟ : ಕ್ಯಾಲೆಬ್ ಲ್ಯಾಂಡ್ರಿ ಜೋನ್ಸ್ (ನೈಟ್ರಾಮ್)

ಅತ್ಯುತ್ತಮ ನಿರ್ದೇಶಕ : ಲಿಯೋಸ್ ಕ್ಯಾರಾಕ್ಸ್, (ಆನೆಟ್)

ಅತ್ಯುತ್ತಮ ಚಿತ್ರಕಥೆ : ರ್ಯುಸುಕ್ ಹಮಗುಚಿ,( ಡ್ರೈವ್​ ಮೈ ಕಾರ್​)

ಕ್ಯಾಮರ್​ ಡಿಓರ್​ : ಮ್ಯೂರಿನಾ

ಶಾರ್ಟ್ ಫಿಲಂ ಪಾಮ್ ಡಿಓರ್​ : ಟಿಯಾನ್​ ಕ್ಸಿಯಾ ವು ಯಾ

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...