alex Certify ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕೋವಿಡ್ ಕಾರಣದಿಂದ ತಿಮ್ಮಪ್ಪನ ದರುಷನಕ್ಕೆ ಬರುವ ಭಕ್ತರ ಸಂಖ್ಯೆಮಿತಿ ಹಾಕಿದ್ದ ಟಿಟಿಡಿ ಇದೀಗ ನಿಯಮ ಸಡಿಲಿಸಿ ದರ್ಶನ ಟಿಕೆಟ್ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ದೇಶಾದ್ಯಂತ ಕೋವಿಡ್-19 ಪ್ರಕರಣಗಳ ಇಳಿಕೆಯಾಗುತ್ತಿದ್ದಂತೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ದರುಷನ ಟಿಕೆಟ್‌ಗೆ ಬೇಡಿಕೆಯೂ ಹೆಚ್ಚಿದೆ. ದೇವಸ್ಥಾನ ಆಡಳಿತ ಮಂಡಳಿಯು ಹೆಚ್ಚಿನ ಭಕ್ತರು ಬರುವ ನಿರೀಕ್ಷೆಯಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದೆ‌

BIG NEWS: ವಿಜ್ಞಾನ-ತಂತ್ರಜ್ಞಾನಕ್ಕೆ ಹೆಸರಾದ ಕರ್ನಾಟಕ ಈಗ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ; ಸರಣಿ ಟ್ವೀಟ್‌ ಮೂಲಕ ಹೆಚ್.ಡಿ.ಕೆ. ಆಕ್ರೋಶ

ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಸರ್ವ ದರ್ಶನ (ಎಸ್‌ಎಸ್‌ಡಿ) ಟೋಕನ್ ಟಿಕೆಟ್ ವಿತರಣೆ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಫೆಬ್ರವರಿ 1 ರಿಂದ 21ರ ನಡುವೆ ತಿರುಪತಿ ದೇವಸ್ಥಾನದಲ್ಲಿ ದರ್ಶನ ಪಡೆಯುವ ಭಕ್ತರ ಸಂಖ್ಯೆ ಸರಿ ಸುಮಾರು 50 ಪ್ರತಿಶತದಷ್ಟು ಏರಿಕೆ ಕಂಡಿದೆ.

ಫೆಬ್ರವರಿ 1ರಂದು ಸುಮಾರು 29 ಸಾವಿರ ಭಕ್ತರು ದೇಗುಲಕ್ಕೆ ಭೇಟಿ ನೀಡಿದರೆ, ಫೆ.21ರಂದು ಸಂಖ್ಯೆ 39 ಸಾವಿರಕ್ಕೂ ಹೆಚ್ಚಿತ್ತು. ಕೆಲವು ತಿಂಗಳಲ್ಲಿ ಕೋವಿಡ್-19 ಪೂರ್ವದಲ್ಲಿದ್ದ ಭಕ್ತರ ಸಂಖ್ಯೆ ಪುನಃ ಮುಟ್ಟಬಹುದು ಎಂದು ಟಿಟಿಡಿ ಅಂದಾಜಿಸಿದೆ.

ಟಿಟಿಡಿ ಫೆ. 24-28ರ ಅವಧಿಗೆ ಹೆಚ್ಚುವರಿಯಾಗಿ 13,000 ಟಿಕೆಟ್‌ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹಾಗೆಯೇ ಶ್ರೀನಿವಾಸಂ ಕಾಂಪ್ಲೆಕ್ಸ್, ಶ್ರೀ ಗೋವಿಂದರಾಜ ಸ್ವಾಮಿ ಚೌಲ್ಟ್ರಿಸ್ ಮತ್ತು ಭೂದೇವಿ ಕಾಂಪ್ಲೆಕ್ಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ 5000 ಆಫ್‌ಲೈನ್ ಟೋಕನ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...