alex Certify ಮಗುವಿನ ಹಠಮಾರಿತನದಿಂದ ಬೇಸತ್ತಿದ್ದೀರಾ ? ಈ ಅಭ್ಯಾಸ ದೂರ ಮಾಡಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿನ ಹಠಮಾರಿತನದಿಂದ ಬೇಸತ್ತಿದ್ದೀರಾ ? ಈ ಅಭ್ಯಾಸ ದೂರ ಮಾಡಲು ಇಲ್ಲಿದೆ ಟಿಪ್ಸ್

ಇಂದಿನ ಜಂಜಾಟದ ಬದುಕಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ಅಭ್ಯಾಸಗಳನ್ನು ಕಲಿಸುವುದು ಸವಾಲಿನ ಕೆಲಸವಾಗಿದೆ. ಮಗು ಚಿಕ್ಕದಿರುವಾಗಲೇ ಒಳ್ಳೆಯ ನಡತೆ ಮತ್ತು ಅಭ್ಯಾಸಗಳನ್ನು ಕಲಿಸುವುದು ಸುಲಭ. ಆದರೆ ಮಗು ಬೆಳೆದು ದೊಡ್ಡವನಾದಾಗ ಅವನ ಆಲೋಚನೆಗಳು ಮತ್ತು ನಡವಳಿಕೆ ಬದಲಾಗುತ್ತದೆ. ಮಕ್ಕಳು ಹಠಮಾರಿತನವನ್ನು ಕಲಿಯುತ್ತಾರೆ. ಇತರರನ್ನು ಅಗೌರವಿಸುತ್ತಾರೆ, ಕೆಲವೊಮ್ಮೆ ಅಸಭ್ಯವಾಗಿ ಮಾತನಾಡುತ್ತಾರೆ.

ಈ ರೀತಿ ವರ್ತಿಸಿದಾಗ ಪೋಷಕರು ತಮ್ಮ ಮಕ್ಕಳನ್ನು ಬೈಯುತ್ತಾರೆ.  ಆದರೆ ಇದು ಮಗುವನ್ನು ಮತ್ತಷ್ಟು ತೊಂದರೆಗೆ ಸಿಲುಕಿಸುತ್ತದೆ. ಹೆತ್ತವರು ಗದರಿಸಿದಾಗ ಮಕ್ಕಳು ಮೌನವಾಗುತ್ತಾರೆ, ಆದರೆ ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಮಗುವನ್ನು ಗದರಿಸುವ ಬದಲು ಈ ಅಭ್ಯಾಸವನ್ನು ಸರಿಪಡಿಸಿ.

ಮಗುವಿನ ನಡವಳಿಕೆಗೆ ಕಾರಣ ಅವನ ಸುತ್ತಲಿನ ಪರಿಸರ. ಮಕ್ಕಳು ಇತರರನ್ನು ನೋಡಿ ಕಲಿಯುತ್ತಾರೆ. ಮಗು ಅಸಭ್ಯವಾಗಿ ವರ್ತಿಸಿದರೆ  ಕೂಗಾಡುವ ಬದಲು ಪ್ರೀತಿಯಿಂದ ಮಾತನಾಡಿ. ಮಗುವಿನ ಕೋಪವು ಕಡಿಮೆಯಾದ ನಂತರ ತಿಳಿಹೇಳಿ. ಮಗು ಯಾಕೆ ಈ ರೀತಿ ಮಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

ಆಗಾಗ್ಗೆ ಮಗು ಹಠಮಾರಿಯಾಗುತ್ತದೆ ಮತ್ತು ಜಗಳವಾಡಲು ಪ್ರಾರಂಭಿಸುತ್ತದೆ. ಜಗಳವಾಡುವ ಅಭ್ಯಾಸವು ಮಗುವಿನಲ್ಲಿ ಕೋಪವನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ ಅನುಚಿತವಾಗಿ ವರ್ತಿಸಬಹುದು. ಮಗು ನಿಮ್ಮೊಂದಿಗೆ ವಾದಿಸಿದರೆ ಆ ಸಮಯದಲ್ಲಿ ಶಾಂತವಾಗಿರಿ. ಮಗುವಿನೊಂದಿಗೆ ವಾದ ಮಾಡುವುದನ್ನು ತಪ್ಪಿಸಿ ಮತ್ತು ಅವನ ಮಾತನ್ನು ಆಲಿಸಿ. ಆಗ ಮಗು ಕೂಡ ನಿಮ್ಮ ಮಾತನ್ನು ಎಚ್ಚರಿಕೆಯಿಂದ ಕೇಳಿಸಿಕೊಳ್ಳುತ್ತದೆ. ತಾಳ್ಮೆ ವಹಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...