alex Certify ಕಾರು ಡ್ಯಾಮೇಜ್ ಮಾಡಿ ಪರಿಹಾರವಾಗಿ ಚಾಕಲೇಟ್ ಬಾರ್‌ ಕೊಟ್ಟ ಕಿಲಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಡ್ಯಾಮೇಜ್ ಮಾಡಿ ಪರಿಹಾರವಾಗಿ ಚಾಕಲೇಟ್ ಬಾರ್‌ ಕೊಟ್ಟ ಕಿಲಾಡಿ

TikToker Fumes After Stranger Attempts to Compensate for Car Damage With Chocolates

ಪಾರ್ಕಿಂಗ್ ಲಾಟ್‌ನಲ್ಲಿ ನಿಲ್ಲಿಸಿದ್ದ ಕಾರು ಡ್ಯಾಮೇಜ್ ಆಗಿರುವುದನ್ನು ನೋಡುವುದು ಎಂದರೆ ಯಾವುದೇ ಮಾಲೀಕರಿಗೂ ಶಾಕ್ ಆಗುವ ಅನುಭವ. ಕಾರುಗಳ ರಿಪೇರಿ ಅದೆಷ್ಟು ದುಬಾರಿ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ.

ಅಮೆರಿಕದ ಮಹಿಳೆಯೊಬ್ಬರು ಶಾಪಿಂಗ್ ಮಾಡಲು ಹೋಗಿ ವಾಲ್‌ಮಾರ್ಟ್ ಎದುರು ನಿಲ್ಲಿಸಿದ್ದ ತಮ್ಮ ಕಾರಿಗೆ ಡ್ಯಾಮೇಜ್ ಆಗಿರುವುದನ್ನು ಕಂಡು ಹತಾಶೆಗೊಂಡಿದ್ದಾರೆ. ಆದರೆ ಇದಕ್ಕಿಂತ ಜಾಸ್ತಿ ಹತಾಶೆ ಮಾಡುವ ವಿಚಾರವೆಂದರೆ, ಕಾರಿಗೆ ಡ್ಯಾಮೇಜ್ ಮಾಡಿದ್ದ ಅಪರಿಚಿತ ವ್ಯಕ್ತಿ ಅಪಾಲಜಿ ಪತ್ರ ಬರೆದು, ಎರಡೇ ಎರಡು ಚಾಕಲೇಟ್ ಇಟ್ಟು ಹೋಗಿರುವುದು.

ತಮ್ಮೀ ಅನುಭವವನ್ನು ಟಿಕ್‌ಟಾಕ್‌ ವಿಡಿಯೋ ಮೂಲಕ ಹಂಚಿಕೊಂಡ @viralgalaxy ಹೆಸರಿನ ಬಳಕೆದಾರಿಣಿ, ತಮ್ಮ ಕಾರಿನ ವಿಂಡ್‌ಸ್ಕ್ರೀನ್‌ನ ವೈಪರ್‌ ಕೆಳಗೆ ಚಾಕ್ಲೇಟ್ ಬಾರ್‌ಗಳನ್ನು ಇಟ್ಟು, ಅಪಾಲಜಿ ಪತ್ರ ಬರೆದುಹೋಗಿರುವ ಚೇಷ್ಟೆ ಬಗ್ಗೆ ಹೇಳಿಕೊಂಡಿದ್ದಾರೆ.

ಇಲ್ಲಿದೆ ಬೆಂಗಳೂರು ಸುತ್ತಮುತ್ತ ಇರೋ ಪಿಕ್ನಿಕ್ ಸ್ಪಾಟ್

ಕಾರಿಗಾದ ಡ್ಯಾಮೇಜ್‌ ಅನ್ನು ಭರಿಸಿಕೊಡಲು ತಮ್ಮಲ್ಲಿ ಸಾಕಷ್ಟು ಹಣವಿಲ್ಲದೇ ಇರುವ ಕಾರಣ ಈ ಚಾಕ್ಲೆಟ್ ಬಾರ್‌ಗಳನ್ನು ಅಪಾಲಜಿಯ ಟೋಕನ್ ಆಗಿ ಕೊಡುತ್ತಿರುವುದಾಗಿ ಆ ಪತ್ರದಲ್ಲಿ ಬರೆಯಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...