alex Certify ಪಂಜರದಿಂದ ವಾಸಸ್ಥಳಕ್ಕೆ ತೆರಳಿದ ಹುಲಿರಾಯ..! ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜರದಿಂದ ವಾಸಸ್ಥಳಕ್ಕೆ ತೆರಳಿದ ಹುಲಿರಾಯ..! ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ

ಬಿಹಾರದ ಪೂರ್ವ ಚಂಪರಣ್​​ ಜಿಲ್ಲೆಯ ಕೇಂದ್ರ ಕಚೇರಿ ಇರುವ ಮೋತಿಹರಿ ಎಂಬಲ್ಲಿ ಸೆರೆ ಹಿಡಿಯಲಾಗಿದ್ದ ಹುಲಿಯನ್ನ ಶುಕ್ರವಾರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ. ಈ ವಿಡಿಯೋವನ್ನ ಐಎಫ್​ಎಸ್​ ಅಧಿಕಾರಿ ರಮೇಶ್​ ಪಾಂಡೆ ಶೇರ್​ ಮಾಡಿದ್ದು ವೈರಲ್​ ಆಗಿದೆ.

ಮೋತಿಹರಿಯಲ್ಲಿ ಸೆರೆಗೆ ಸಿಕ್ಕಿದ್ದ ಹುಲಿಯನ್ನ ಪಂಜರದಲ್ಲಿ ಇಡಲಾಗಿತ್ತು. ಬಳಿಕ ಇದನ್ನ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಟ್ರಕ್​ನಲ್ಲಿ ತರಲಾಯ್ತು. ಹುಲಿ ಸಂರಕ್ಷಿತ ಪ್ರದೇಶಕ್ಕೆ ಬರ್ತಾ ಇದ್ದಂತೆ ಹುಲಿಯು ಪಂಜರದಲ್ಲಿ ಹೊರಬರಲು ಕಾತುರನಾಗಿದ್ದಂತೆ ಕಂಡು ಬಂತು. ಪಂಜರದ ಬಾಗಿಲನ್ನ ತೆರೆಯುತ್ತಿದ್ದಂತೆಯೇ ಅಲ್ಲಿಂದ ಜಿಗಿದ ಹುಲಿರಾಯ ಸಂರಕ್ಷಿತ ಪ್ರದೇಶದ ಕಡೆ ಓಡಿದೆ.

ಮೋತಿಹರಿ ಎಂಬಲ್ಲಿ ರಕ್ಷಿಸಲಾಗಿದ್ದ ಹುಲಿಯನ್ನ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿದೆ. ಹುಲಿ ತನ್ನ ವಾಸಸ್ಥಾನಕ್ಕೆ ಮರಳೋದನ್ನ ನೋಡೋದಕ್ಕಿಂತ ಉತ್ತಮವಾದದ್ದು ಇನ್ನೇನಿದೆ ಎಂದು ರಮೇಶ್​ ಪಾಂಡೆ ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

— Ramesh Pandey (@rameshpandeyifs) June 18, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...