alex Certify ಪ್ಲಾಸ್ಟಿಕ್ ಬಾಟಲಿ ಮೇಲೆ ಎಕ್ಸ್‌ ಪೈರಿ ಡೇಟ್‌ ಮುದ್ರಿಸುವುದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಲಾಸ್ಟಿಕ್ ಬಾಟಲಿ ಮೇಲೆ ಎಕ್ಸ್‌ ಪೈರಿ ಡೇಟ್‌ ಮುದ್ರಿಸುವುದರ ಹಿಂದಿದೆ ಈ ಕಾರಣ

ಯಾವುದೇ ಸಮಾರಂಭಗಳಲ್ಲೂ ಈಗೆಲ್ಲಾ ನೀರನ್ನು ಕೊಡಲು ಪ್ಲಾಸ್ಟಿಕ್ ಬಾಟಲಿಗಳನ್ನೇ ನೆಚ್ಚಿಕೊಳ್ಳಲಾಗುತ್ತಿದೆ. ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರು ಶುದ್ಧವಾಗಿರುವುದೆಂದು ಬಹುತೇಕ ಮಂದಿ ನಂಬಿಕೊಂಡಿದ್ದಾರೆ.

ಆದರೆ ಇದೇ ನೀರಿನ ಬಾಟಲಿಗಳ ಮೇಲೆ ಎಷ್ಟು ದಿನಗಳ ಒಳಗೆ ನೀರನ್ನು ಬಳಕೆ ಮಾಡುವುದು ಸೂಕ್ತ ಎಂದು ಬರೆಯಲಾಗಿರುತ್ತದೆ. ಇಷ್ಟಕ್ಕೂ ನೀರಿನ ಬಾಟಲಿಗೆ ಆಯುಷ್ಯಾವಧಿಯನ್ನು ಏಕೆ ಬರೆಯಬೇಕು? ಆ ದಿನದ ಬಳಿಕ ನೀರಿನ ಗುಣಮಟ್ಟವೇನಾದರೂ ಹಾಳಾಗುವುದೇ? ಎಂಬೆಲ್ಲಾ ಪ್ರಶ್ನೆಗಳು ಏಳುತ್ತವೆ.

ಡ್ರೆಸ್ ʼಬಟನ್ʼ ಅದಲು ಬದಲಾದ್ರೆ ಏನರ್ಥ ಗೊತ್ತಾ…….?

ಈ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರಗಳು:

* ಆಹಾರ ಹಾಗೂ ಪಾನೀಯಗಳ ಪ್ರತಿಯೊಂದು ಉತ್ಪನ್ನದ ಮೇಲೂ ಉತ್ಪಾದಕರು ಅವುಗಳ ಆಯುಷ್ಯದ ದಿನಾಂಕ ಹಾಗೂ ಬಳಸಲಾದ ಪದಾರ್ಥಗಳ ಪಟ್ಟಿಯನ್ನು ಬರೆದಿರಬೇಕೆಂಬ ನಿಯಮಗಳಿವೆ ಎಂದು ನಿಮಗೆ ಗೊತ್ತೇ ಇದೆ. ಬಾಟಲಿ ನೀರು ಸಹ ಇದೇ ವರ್ಗಕ್ಕೆ ಸೇರುವ ಕಾರಣ, ನೀರಿಗೆ ಅಲ್ಲದಿದ್ದರೂ ಪ್ಲಾಸ್ಟಿಕ್ ಬಾಟಲಿಗೆ ಆಯುಷ್ಯದ ದಿನಾಂಕ ಬರೆದಿರಲೇಬೇಕು.

* ಪ್ಲಾಸ್ಟಿಕ್‌ ಬಾಟಲಿಗಳು ನೀರಿನ ಮೇಲೆ ಅಪಾಯಕಾರಿ ಪರಿಣಾಮ ಉಂಟು ಮಾಡಬಲ್ಲವು. ಪ್ಲಾಸ್ಟಿಕ್ ಬಾಟಲಿಗಳ ವೆಚ್ಚ ಕಡಿಮೆ ಮಾಡಲು, ಉತ್ಪಾದಕರು ಅವುಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತಾರೆ. ಇದರಿಂದಾಗಿ, ಪ್ಲಾಸ್ಟಿಕ್ ಬಾಟಲಿಯಲ್ಲಿ ಸಂಗ್ರಹಿಸಿಟ್ಟ ನೀರು ಬ್ಯಾಕ್ಟೀರಿಯಾ, ಕೆಟ್ಟ ವಾಸನೆಗಳನ್ನು ಪಡೆದು, ರುಚಿ ಹಾಳು ಮಾಡಿಕೊಳ್ಳಬಲ್ಲದು.

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: SC, ST ಕಾಲೋನಿ, ಹಾಡಿ, ತಾಂಡಾ, ಗೊಲ್ಲರಹಟ್ಟಿಗಳಲ್ಲಿ ರೇಷನ್ ಅಂಗಡಿ

* ಪ್ಲಾಸ್ಟಿಕ್ ಬಾಟಲಿಗಳನ್ನು ಸೂರ್ಯನ ಬೆಳಕಿನಲ್ಲಿ ಹೆಚ್ಚಿನ ಅವಧಿಗೆ ಇಟ್ಟಾಗ, ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕ ಅಂಶ ನೀರಿನ ಒಳಗೆ ಸೇರಬಹುದು. ಈ ರಾಸಾಯನಿಕಗಳಲ್ಲಿ ಒಂದು ಬೈಫಿನೈಲ್ ಎ ಆಗಿದ್ದು, ಇದರಿಂದ ಹೃದಯ ಸಂಬಂಧಿ ಅನೇಕ ಕಾಯಿಲೆಗಳು, ಸ್ತನ ಕ್ಯಾನ್ಸರ್‌, ಪುರುಷರಲ್ಲಿ ಪುರುಷತ್ವ ನಶಿಸುವುದು ಹಾಗೂ ಮೆದುಳಿನಲ್ಲಿ ಹಾನಿಯಾಗುವ ಸಾಧ್ಯತೆಗಳು ಇರುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...