alex Certify ಬೆಂಕಿಯಲ್ಲಿ ಸುಟ್ಟರೂ ಕರಗುವುದಿಲ್ಲ ಈ ಐಸ್​ ಕ್ರೀಂ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಕಿಯಲ್ಲಿ ಸುಟ್ಟರೂ ಕರಗುವುದಿಲ್ಲ ಈ ಐಸ್​ ಕ್ರೀಂ…!

ಐಸ್​ ಕ್ರೀಮ್​ಗಳು ಅಂದರೆ ಅದು ಕರಗುತ್ತದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಚೀನಾದ ಐಸ್​ ಕ್ರೀಮ್​ ಬ್ರ್ಯಾಂಡ್​ ಝಾಂಗ್​ ಕ್ಸು ಗಾವೋ ಮಾತ್ರ ತನ್ನ ಉತ್ಪನ್ನಗಳ ಕಾರಣಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ವಿರೋಧವನ್ನು ಎದುರಿಸುತ್ತಿದೆ, ಹೆಚ್ಚಿನ ತಾಪಮಾನಕ್ಕೆ ಒಳಗಾದಾಗಲೂ ಈ ಐಸ್​ ಕ್ರೀಮ್​ ಕರಗುವುದಿಲ್ಲ. .

ಇತ್ತೀಚಿಗೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಇಂಟರ್ನೆಟ್​ ಬಳಕೆದಾರರು ಗಾವೊ ಬ್ರ್ಯಾಂಡ್ ಐಸ್ ಕ್ರೀಮ್ ಅನ್ನು ಲೈಟರ್‌ನಿಂದ ಸುಡುವ ಮೂಲಕ ಪರೀಕ್ಷೆ ಮಾಡಿದ್ದಾರೆ. ಎಷ್ಟೇ ಸುಟ್ಟರೂ ಈ ಐಸ್​ ಕ್ರೀಮ್​ ಕರಗಿಲ್ಲ , ಸುಟ್ಟ ಆಹಾರದ ಪರಿಮಳ ಬಂದರೂ ಸಹ ಐಸ್​ ಕ್ರೀಂ ಮಾತ್ರ ಕರಗದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಮತ್ತೆ ಇಂಟರ್ನೆಟ್ ಗೆ ಮರಳಿದ್ದಾನೆ‘ಗುಲಾಬಿ ಆಂಖೇನ್’ಹಾಡಿ ಖ್ಯಾತಿ ಪಡೆದಿದ್ದ ಬಾಲಕ..!

ಮತ್ತೊಂದು ಸೋಶಿಯಲ್​ ಮೀಡಿಯಾ ಪೋಸ್ಟ್​ನಲ್ಲಿ ಐಸ್​ ಕ್ರೀಂ 50 ನಿಮಿಷಗಳಿಗಿಂತ ಹೆಚ್ಚು ಕಾಲ 31 ಡಿಗ್ರಿ ತಾಪಮಾನದಲ್ಲಿ ಬೇಯಿಸಿದಾಗಲೂ ಐಸ್​ ಕ್ರೀಂ ಕರಗದೇ ಇರುವುದನ್ನು ಕಾಣಬಹುದಾಗಿದೆ. ಸಾಮಾನ್ಯ ಐಸ್​ ಕ್ರೀಮ್​ಗಳಂತೆಯೇ ಕರಗುವುದನ್ನು ಬಿಟ್ಟು ಈ ಐಸ್​ ಕ್ರೀಂ ಜಿಗುಟಿನ ರೂಪಕ್ಕೆ ತಿರುಗಿದೆ.

‘ಹರ್ಮ್ಸ್ ಆಫ್ ಐಸ್ ಕ್ರೀಮ್’ ಎಂದೂ ಕರೆಯಲ್ಪಡುವ ಶಾಂಘೈ ಮೂಲದ ಕಂಪನಿಯು ಅತ್ಯಂತ ದುಬಾರಿ ದರದ ಐಸ್​ ಕ್ರೀಂ ಉತ್ಪನ್ನಗಳನ್ನು ಹೊಂದಿದ್ದರೂ ಸಹ ಪ್ರಮುಖ ನಗರಗಳಲ್ಲಿ ಜನಪ್ರಿಯವಾಗಿದೆ. ಕೆಲವು ಪ್ರೀಮಿಯರ್ ಆವೃತ್ತಿಯ ಐಸ್ ಕ್ರೀಮ್‌ಗಳನ್ನು 70 ಯುವಾನ್ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...