alex Certify ಮತ್ತೆ ಇಂಟರ್ನೆಟ್ ಗೆ ಮರಳಿದ್ದಾನೆ‘ಗುಲಾಬಿ ಆಂಖೇನ್’ಹಾಡಿ ಖ್ಯಾತಿ ಪಡೆದಿದ್ದ ಬಾಲಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಇಂಟರ್ನೆಟ್ ಗೆ ಮರಳಿದ್ದಾನೆ‘ಗುಲಾಬಿ ಆಂಖೇನ್’ಹಾಡಿ ಖ್ಯಾತಿ ಪಡೆದಿದ್ದ ಬಾಲಕ..!

ಕೆಲವು ವರ್ಷಗಳ ಹಿಂದೆ ಗುಲಾಬಿ ಆಂಖೇನ್ ಹಾಡಿದ ಪುಟ್ಟ ಮಗು ನಿಮಗೆ ನೆನಪಿದೆಯೇ? ಅವನ ವಿಡಿಯೋ ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗಿತ್ತು. ಇಂಟರ್ನೆಟ್ ಪುಟ್ಟ ಬಾಲಕನನ್ನು ಬಹಳ ಇಷ್ಟಪಟ್ಟಿತು. ಈಗ ಆ ಪುಟ್ಟ ಪೋರ ಮತ್ತಷ್ಟು ಬೆಳೆದಿದ್ದಾನೆ. ಇದೀಗ ಆತನ ಮತ್ತೊಂದು ವಿಡಿಯೋ ಇಂಟರ್ನೆಟ್ ನಲ್ಲಿ ರೌಂಡಪ್ ಹೊಡೆಯುತ್ತಿದೆ.

ಹೌದು, ಇದೀಗ ಆ ಬಾಲಕ ʼಮೇರೆ ಮೆಹಬೂಬ್ ಕಯಾಮತ್ ಹೋಗಿʼ ಹಾಡನ್ನು ಹಾಡಿದ್ದಾನೆ. ಈ ವೈರಲ್ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಕಿರು ವಿಡಿಯೋದಲ್ಲಿ ಬಾಲಕ, ಮಿಸ್ಟರ್ ಎಕ್ಸ್ ಇನ್ ಬಾಂಬೆ ಚಿತ್ರದ ಪ್ರಸಿದ್ಧ ಹಾಡನ್ನು ಮಧುರವಾದ ಕಂಠದಲ್ಲಿ ಹಾಡಿದ್ದಾನೆ. ಕೀಬೋರ್ಡ್ ನುಡಿಸುತ್ತಾ ಹಾಡನ್ನು ಹಾಡಿದ್ದಾನೆ.

ಈ ವಿಡಿಯೋವನ್ನು ಹಂಚಿಕೊಂಡ ಅಧಿಕಾರಿ ಇದು ನನ್ನ ದಿನವನ್ನು ಸುಂದರವಾಗಿ ಮಾಡಿದೆ ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ 50 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಪ್ರತಿಭಾವಂತ ಬಾಲಕನ ಮಧುರವಾದ ಧ್ವನಿಯನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ.

— Awanish Sharan (@AwanishSharan) July 8, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...