ಐಸ್ ಕ್ರೀಮ್ಗಳು ಅಂದರೆ ಅದು ಕರಗುತ್ತದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಚೀನಾದ ಐಸ್ ಕ್ರೀಮ್ ಬ್ರ್ಯಾಂಡ್ ಝಾಂಗ್ ಕ್ಸು ಗಾವೋ ಮಾತ್ರ ತನ್ನ ಉತ್ಪನ್ನಗಳ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧವನ್ನು ಎದುರಿಸುತ್ತಿದೆ, ಹೆಚ್ಚಿನ ತಾಪಮಾನಕ್ಕೆ ಒಳಗಾದಾಗಲೂ ಈ ಐಸ್ ಕ್ರೀಮ್ ಕರಗುವುದಿಲ್ಲ. .
ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಇಂಟರ್ನೆಟ್ ಬಳಕೆದಾರರು ಗಾವೊ ಬ್ರ್ಯಾಂಡ್ ಐಸ್ ಕ್ರೀಮ್ ಅನ್ನು ಲೈಟರ್ನಿಂದ ಸುಡುವ ಮೂಲಕ ಪರೀಕ್ಷೆ ಮಾಡಿದ್ದಾರೆ. ಎಷ್ಟೇ ಸುಟ್ಟರೂ ಈ ಐಸ್ ಕ್ರೀಮ್ ಕರಗಿಲ್ಲ , ಸುಟ್ಟ ಆಹಾರದ ಪರಿಮಳ ಬಂದರೂ ಸಹ ಐಸ್ ಕ್ರೀಂ ಮಾತ್ರ ಕರಗದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಮತ್ತೆ ಇಂಟರ್ನೆಟ್ ಗೆ ಮರಳಿದ್ದಾನೆ‘ಗುಲಾಬಿ ಆಂಖೇನ್’ಹಾಡಿ ಖ್ಯಾತಿ ಪಡೆದಿದ್ದ ಬಾಲಕ..!
ಮತ್ತೊಂದು ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ ಐಸ್ ಕ್ರೀಂ 50 ನಿಮಿಷಗಳಿಗಿಂತ ಹೆಚ್ಚು ಕಾಲ 31 ಡಿಗ್ರಿ ತಾಪಮಾನದಲ್ಲಿ ಬೇಯಿಸಿದಾಗಲೂ ಐಸ್ ಕ್ರೀಂ ಕರಗದೇ ಇರುವುದನ್ನು ಕಾಣಬಹುದಾಗಿದೆ. ಸಾಮಾನ್ಯ ಐಸ್ ಕ್ರೀಮ್ಗಳಂತೆಯೇ ಕರಗುವುದನ್ನು ಬಿಟ್ಟು ಈ ಐಸ್ ಕ್ರೀಂ ಜಿಗುಟಿನ ರೂಪಕ್ಕೆ ತಿರುಗಿದೆ.
‘ಹರ್ಮ್ಸ್ ಆಫ್ ಐಸ್ ಕ್ರೀಮ್’ ಎಂದೂ ಕರೆಯಲ್ಪಡುವ ಶಾಂಘೈ ಮೂಲದ ಕಂಪನಿಯು ಅತ್ಯಂತ ದುಬಾರಿ ದರದ ಐಸ್ ಕ್ರೀಂ ಉತ್ಪನ್ನಗಳನ್ನು ಹೊಂದಿದ್ದರೂ ಸಹ ಪ್ರಮುಖ ನಗರಗಳಲ್ಲಿ ಜನಪ್ರಿಯವಾಗಿದೆ. ಕೆಲವು ಪ್ರೀಮಿಯರ್ ಆವೃತ್ತಿಯ ಐಸ್ ಕ್ರೀಮ್ಗಳನ್ನು 70 ಯುವಾನ್ ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ.