alex Certify ‘ಪತಿ ಬಾಡಿಗೆಗೆ ಲಭ್ಯವಿದ್ದಾರೆ’ : ಹಣಕ್ಕಾಗಿ ಹೊಸ ಯೋಜನೆ ಆರಂಭಿಸಿದ್ದಾಳೆ ಈ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪತಿ ಬಾಡಿಗೆಗೆ ಲಭ್ಯವಿದ್ದಾರೆ’ : ಹಣಕ್ಕಾಗಿ ಹೊಸ ಯೋಜನೆ ಆರಂಭಿಸಿದ್ದಾಳೆ ಈ ಮಹಿಳೆ..!

ಕುಟುಂಬ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಹಣ ಸಂಪಾದನೆಗಾಗಿ ಪತ್ನಿಯು ತನ್ನ ಪತಿಯನ್ನೇ ಬಾಡಿಗೆಗೆ ನೀಡುತ್ತಿರುವ ಆಶ್ಚರ್ಯಕರ ಘಟನೆಯೊಂದು ವರದಿಯಾಗಿದೆ. ಬ್ರಿಟನ್​ನಲ್ಲಿರುವ ಲಾರಾ ಯಂಗ್​ ಎಂಬಾಕೆ ಸ್ವಲ್ಪ ಹೆಚ್ಚಿನ ಹಣವನ್ನು ದುಡಿಯುವ ಸಲುವಾಗಿ ಈ ಡಿಫರೆಂಟ್​ ಪ್ಲಾನ್​ ಮಾಡಿದ್ದಾಳೆ ಎನ್ನಲಾಗಿದೆ.

ಈಕೆ ಯಾವುದೇ ಮುಜುಗರವಿಲ್ಲದೇ ನನ್ನ ಪತಿಯನ್ನು ಬಾಡಿಗೆಗೆ ಪಡೆಯಿರಿ ಎಂಬ ಯೋಜನೆಯನ್ನು ಆರಂಭಿಸಿದ್ದಾಳೆ. ಮೂರು ಮಕ್ಕಳ ತಾಯಿಯಾಗಿರುವ ಲಾರಾ ಪೋಡ್​ಕಾಸ್ಟ್​ನ ಮಹಿಳೆಯಿಂದ ಈ ಪ್ಲಾನ್​ ಬಗ್ಗೆ ತಿಳಿದುಕೊಂಡಿದ್ದಾಳೆ. ಅಂದ ಹಾಗೆ ಪತಿಯನ್ನು ಬಾಡಿಗೆ ಪಡೆಯುವುದು ಅಂದರೆ ನೀವೆಂದುಕೊಂಡಂತೆ ಅಲ್ಲ. ಈಕೆಯ ಪತಿಯನ್ನು ನೀವು ಮನೆಯ ಪೀಠೋಪಕರಣಗಳನ್ನು ಜೋಡಿಸಲು ಇವರನ್ನು ಕೆಲಸಕ್ಕೆ ಇರಿಸಬಹುದಾಗಿದೆ. 41 ವರ್ಷ ಲಾರಾ ಪತಿ ಅಚ್ಚುಕಟ್ಟಾಗಿ ಈ ಕೆಲಸಗಳನ್ನು ಮಾಡುತ್ತಾರೆ.

ಈ ವಿಚಾರವಾಗಿ ಮಾತನಾಡಿರುವ ಲಾರಾ, ನನ್ನ ಪತಿ ಮನೆ ಹಾಗೂ ಗಾರ್ಡನ್​ನ ಎಲ್ಲಾ ಕೆಲಸಗಳಲ್ಲಿ ನಿಪುಣರಿದ್ದಾರೆ. ಆದ್ದರಿಂದ ಇವರನ್ನು ಈ ರೀತಿ ಕೆಲಸಕ್ಕೆ ಏಕೆ ನಿಯೋಜಿಸಬಾರದು ಎಂದು ಯೋಚಿಸಿದೆ. ಸ್ಮಾರ್ಟ್​ ವೈಫ್​ ಎಂಬ ವೆಬ್​ಸೈಟ್​ನ್ನು ಆರಂಭಿಸಿದೆ. ಫೇಸ್​ಬುಕ್​ನಂತಹ ಸೋಶಿಯಲ್ ಮೀಡಿಯಾಗಳಲ್ಲಿ ಜಾಹಿರಾತುಗಳನ್ನು ನೀಡಿದೆ. ಕೆಲವರು ಇವರಿಗೆ ಪ್ರಾಮಾಣಿಕ ಕೆಲಸಗಳನ್ನು ನೀಡುತ್ತಾರೆ. ಇನ್ನೂ ಕೆಲವರು ಈ ಪರಿಕಲ್ಪನೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...