alex Certify ಇಲ್ಲಿದೆ ಸೋಪ್ ಗುಳ್ಳೆಯ ಮೇಲೆ ಐಸ್ ರೂಪುಗೊಳ್ಳುವ ಅದ್ಭುತ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಸೋಪ್ ಗುಳ್ಳೆಯ ಮೇಲೆ ಐಸ್ ರೂಪುಗೊಳ್ಳುವ ಅದ್ಭುತ ವಿಡಿಯೋ

ನೀವು ಇಂಟರ್ನೆಟ್‌ನಲ್ಲಿ ಅತ್ಯಂತ ತೃಪ್ತಿಕರವಾದ ವಿಡಿಯೋಗಳನ್ನು ಹುಡುಕುತ್ತಿದ್ದರೆ, ಸದ್ಯ ನಿಮ್ಮ ಹುಡುಕಾಟವನ್ನು ನಿಲ್ಲಿಸಿ. ಏಕೆಂದರೆ ಅಂಥದ್ದೊಂದು ಅದ್ಭುತ ವಿಡಿಯೋ ಇದಾಗಿದೆ. ತುಂಬಾ ಅಪರೂಪದ, ತುಂಬಾ ಸುಂದರವಾಗಿರುವ, ಮನಸ್ಸನ್ನು ಅಚ್ಚರಿ ಹಾಗೂ ಉತ್ಸಾಹಕ್ಕೆ ತಳ್ಳುವ ವಿಡಿಯೋ ಇದಾಗಿದೆ.

ಸೋಪ್ ಗುಳ್ಳೆಯ ಮೇಲೆ ಐಸ್ ರೂಪುಗೊಳ್ಳುವ ಅದ್ಭುತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈಗ ವೈರಲ್ ಆಗಿರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಬ್ಯುಟೆಂಗೆಬೀಡೆನ್ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಸೋಪ್ ಗುಳ್ಳೆಗಳನ್ನು ನೋಡಬಹುದು. ಕ್ರಮೇಣ ಅದರ ಮೇಲೆ ಮಂಜುಗಡ್ಡೆಯು ರೂಪುಗೊಳ್ಳುತ್ತಿದೆ. ಮಂಜುಗಡ್ಡೆಯು ಸಂಕೀರ್ಣವಾದ ಎಲೆಯ ಮಾದರಿಯಲ್ಲಿ ರೂಪುಪಡೆದುಕೊಳ್ಳುತ್ತದೆ. ಇದನ್ನು ನೋಡನೋಡುತ್ತಲೇ ಅಚ್ಚರಿ ಉಂಟಾಗುವುದು ದಿಟ.‌

ಸಂಪೂರ್ಣ ಸೋಪ್ ಗುಳ್ಳೆ ಹೇಗೆ ಹೆಪ್ಪುಗಟ್ಟುತ್ತದೆ ಮತ್ತು ಸೂರ್ಯನ ಬೆಳಕಿನಿಂದಾಗಿ ಎಲ್ಲವೂ ಚಿನ್ನದ ಬಣ್ಣವನ್ನು ಹೇಗೆ ಹೊಂದಿದ್ದವು ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...