alex Certify ಮದುವೆ ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದ ವರನಿಗೆ ನೆರವಾದ ಪೊಲೀಸರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ತಪ್ಪಿಸಿಕೊಳ್ಳುವ ಆತಂಕದಲ್ಲಿದ್ದ ವರನಿಗೆ ನೆರವಾದ ಪೊಲೀಸರು….!

ಬೋಸ್ಟನ್​ ಪೊಲೀಸ್​ ಇಲಾಖೆಯ ಬಂದರು ಗಸ್ತು ಘಟಕದ ಅಧಿಕಾರಿಗಳು ತೊಂದರೆಯಲ್ಲಿರುವ ಬೋಟರ್​ಗಳಿಗೆ ಆಗಾಗ್ಗೆ ಸಹಾಯ ಮಾಡುತ್ತಿರುತ್ತಾರೆ. ಆದರೆ ಕಳೆದ ವಾರಾಂತ್ಯದಲ್ಲಿ ತನ್ನ ಮದುವೆಯನ್ನು ಮಿಸ್‌ ಮಾಡಿಕೊಳ್ಳುವ ಅಪಾಯದಲ್ಲಿದ್ದ ವರನನ್ನು ಈ ಪೊಲೀಸರು ನೆರವಾಗಿ ಮದುವೆ ನಿರ್ವಿಘ್ನವಾಗಿ ನೆರವೇರಲು ಕಾರಣರಾಗಿದ್ದಾರೆ.

ಪ್ಯಾಟ್ರಿಕ್​ ಮಹೋನಿ ಎಂಬುವರು ಶನಿವಾರ ಬೋಸ್ಟನ್​ ಬಂದರಿನ ಮಧ್ಯದಲ್ಲಿರುವ ಥಾಂಪ್ಸನ್​ ದ್ವೀಪದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು, ಆದರೆ ವಧು ಕಾಯುತ್ತಿದ್ದ ದ್ವೀಪಕ್ಕೆ ಅವರನ್ನು ಕರೆದೊಯ್ಯಬೇಕಿದ್ದ ದೋಣಿ ಕೆಟ್ಟುಹೋಯಿತು.

ವರ, ಫೋಟೋಗ್ರಾರ್​, ಡಿಜೆ ಮತ್ತು ಹೂವಿನ ವ್ಯವಸ್ಥೆ ಸಹ ಮದುವೆ ಸ್ಥಳಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ. ಕೊನೆಗೆ ಹನ್ನೆರಡಕ್ಕೂ ಹೆಚ್ಚು ಜನರನ್ನು ಪೋಲೀಸ್​ ದೋಣಿಯಲ್ಲಿ ದ್ವೀಪಕ್ಕೆ ಸಾಗಿಸಲಾಯಿತು. ಹೀಗಾಗಿ ಹನ್ನಾ ಕ್ರಾಫೋರ್ಡ್​ ಅವರೊಂದಿಗಿನ ಮಹೋನಿಯ ಮದುವೆಯು ನಿಗದಿತ ರೀತಿಯಲ್ಲಿ ಮುಂದುವರಿಯಿತು.

ಪೊಲೀಸ್​ ಇಲಾಖೆಯು ತನ್ನ ಈ ಕಾರ್ಯವನ್ನು ವಿವರವಾಗಿ ತಿಳಿಸಿ ತನ್ನ ಕರ್ತವ್ಯದ ಬಗ್ಗೆ ಹೆಮ್ಮೆಪಟ್ಟುಕೊಂಡಿದೆ. ವರನಿಗೆ ನೆರವಾದ ಪೊಲೀಸ್​ ಅಧಿಕಾರಿಯ ಜತೆಗೆ ನವ ದಂಪತಿ ಫೋಟೋ ತೆಗೆಸಿಕೊಂಡಿದ್ದು, ಅದನ್ನೂ ಸಹ ಪೊಲೀಸ್​ ಇಲಾಖೆ ಶೇರ್​ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...