alex Certify ಆತ್ಮ ಚರಿತ್ರೆಯಲ್ಲಿ ಇಂಟ್ರಸ್ಟಿಂಗ್‌ ಸಂಗತಿ ಬಿಚ್ಚಿಟ್ಟ ರಾಸ್​ ಟೇಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮ ಚರಿತ್ರೆಯಲ್ಲಿ ಇಂಟ್ರಸ್ಟಿಂಗ್‌ ಸಂಗತಿ ಬಿಚ್ಚಿಟ್ಟ ರಾಸ್​ ಟೇಲರ್

ಕ್ರಿಕೆಟಿಗ ರಾಸ್​ ಟೇಲರ್​ ತಮ್ಮ ಆತ್ಮಚರಿತ್ರೆ ‘ಬ್ಲ್ಯಾಕ್​ ಅಂಡ್​ ವೈಟ್ʼ ಮೂಲಕ ದೊಡ್ಡ ಸದ್ದು ಮಾಡುತ್ತಿದ್ದು, ಅನೇಕ ಸಂಗತಿ ಬಹಿರಂಗಪಡಿಸಿ ಕ್ರಿಕೆಟ್​ ಲೋಕವನ್ನು ದಂಗುಬಡಿಸಿದ್ದಾರೆ.

ಅವರು ಐಪಿಎಲ್​ನಲ್ಲಿ ತಮ್ಮ ಮಾಜಿ ಸಹ ಆಟಗಾರ ವಿರಾಟ್​ ಕೊಹ್ಲಿ ಬಗ್ಗೆ ಗಮನಾರ್ಹವಾದ ಉಲ್ಲೇಖ ಮಾಡಿದ್ದಾರೆ. ನಾನು 2008 ರಲ್ಲಿ ಆರ್​ಸಿಬಿಯಲ್ಲಿ ನಾವು ಐವರು (ಅನಿಲ್​, ವಿರಾಟ್​, ರಾಹುಲ್​, ಜಹೀರ್​ ಮತ್ತು ನಾನು) ವಿರಾಮದ ಸಮಯದಲ್ಲಿ ಅನಿಲ್​ ಅವರ ಬಿಎಂಡಬ್ಲುನಲ್ಲಿ ಲಾಂಗ್​ ರೋಡ್​ ಟ್ರಿಪ್​ ಹೋಗಿದ್ದೆವು.

ಅದೃಷ್ಟವಶಾತ್​ ನಾವು ಯಾವುದೇ ಅಭಿಮಾನಿಗಳಿಂದ ಗಮನಿಸಲಿಲ್ಲ. ತಡರಾತ್ರಿ ಹಿಂತಿರುಗಿ ಬರುವಾಗ ಹಿಂಬದಿಯ ಟೈರ್​ಗಳಲ್ಲಿ ಒಂದು ಏಕಾಏಕಿ ಒಡೆದಿದೆ. ಈ ಘಟನೆ ನಡೆದಲ್ಲಿಂದ ಬೆಂಗಳೂರು 200 ಕಿ.ಮೀ. ದೂರದಲ್ಲಿತ್ತು.

ಮರುದಿನ ಆರ್​ಸಿಬಿ ಪಂದ್ಯ ಬೇರೆ ಇತ್ತು. ಹತ್ತಿರದ ಪಂಕ್ಚರ್​ ಅಂಗಡಿ ಎಲ್ಲಿದೆ ಎಂದು ನಾವು ಸ್ಥಳೀಯರನ್ನು ಕೇಳಿದೆವು. ಅದೃಷ್ಟವಶಾತ್​ ಅದು ಕಾಲ್ನಡಿಗೆಯಲ್ಲಿ ಕೇವಲ 10 ನಿಮಿಷಗಳ ದೂರದಲ್ಲಿತ್ತು. ನಾನು ಮತ್ತು ವಿರಾಟ್​ ಪಂಕ್ಚರ್​ ಅಂಗಡಿಗೆ ಹೋಗಲು ನಿರ್ಧರಿಸಿದೆವು, ಇತರರು ಹಿಂದೆ ಉಳಿದರು. ಅಂಗಡಿಯನ್ನು ತಲುಪಿದ ನಂತರ, ಅಂಗಡಿಯ ಮಾಲೀಕರು ನಾವು ಸಮಯವನ್ನು ಉಳಿಸುವ ಸಲುವಾಗಿ ಹಳೆಯದನ್ನು ದುರಸ್ತಿ ಮಾಡುವ ಬದಲು ಹೊಸ ಟೈರ್​ ಖರೀದಿಸಿ ಎಂದು ಶಿಫಾರಸು ಮಾಡಿದರು.

ಆ ಪ್ರಕಾರ ಅವರು ನಮ್ಮನ್ನು ಟೈರ್​ ತುಂಬಿದ್ದ ಕೋಣೆಗೆ ಕರೆದೊಯ್ದರು. ಅಲ್ಲಿದ್ದ ವಿವಿಧ ಆಯ್ಕೆಗಳ ಬಗ್ಗೆ ನಾನು ಗಮನಿಸುತ್ತಿದ್ದೆ. ನಾನು ಸ್ಥಳೀಯರಾದ ಕೊಹ್ಲಿಯನ್ನು ಕೇಳಿದೆ, ಯಾವ ಬ್ರಾಂಡ್​ ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದು. ಯಾವುದೇ ಹಿಂಜರಿಕೆಯಿಲ್ಲದೆ ಅವರು ಹೇಳಿದರು, “ದೀರ್ಘ ಬಾಳಿಕೆಗಾಗಿ ನಾನು ಎಂಆರ್​ಎಫ್ ಅನ್ನು ಸಂರ್ಪೂಣ ನಂಬುತ್ತೇನೆ. ಮರಳಿ ಸವಾರಿ ನಿಜವಾಗಿಯೂ ಆರಾಮದಾಯಕವಾಗಿತ್ತು. ಟೈರ್​ ಅನ್ನು ಇನ್ನೂ ಬದಲಾಯಿಸಲಾಗಿಲ್ಲ ಎಂದು ಕುಂಬ್ಳೆ ಇತ್ತೀಚೆಗೆ ದೃಢಪಡಿಸಿದರು ಎಂದು ರೆಡ್​ಹಿಟ್​ ಪೋಸ್ಟ್​ನಲ್ಲಿ ಅವರ ಆತ್ಮಚರಿತ್ರೆಯ ಅಂಶಗಳನ್ನು ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...