alex Certify ನಿಮ್ಮ ಮನೆಯ ಆಸುಪಾಸಿನಲ್ಲೇ ಬೆಳೆಸಬಹುದು ಹಲವು ಉಪಯೋಗ ಹೊಂದಿರುವ ಈ ಗಿಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮನೆಯ ಆಸುಪಾಸಿನಲ್ಲೇ ಬೆಳೆಸಬಹುದು ಹಲವು ಉಪಯೋಗ ಹೊಂದಿರುವ ಈ ಗಿಡ

ನಿಮ್ಮದು ಅಪಾರ್ಟ್ ಮೆಂಟ್ ಮನೆಯಾಗಿರಲಿ, ಬಾಡಿಗೆ ಮನೆಯಾಗಿರಲಿ ಕೆಲವೊಂದು ಸಸ್ಯಗಳನ್ನು ಸಣ್ಣ ಪಾಟ್ ನಲ್ಲಿಟ್ಟಾದರೂ ಮನೆಯ ಆಸುಪಾಸಿನಲ್ಲಿ ಇಟ್ಟುಕೊಳ್ಳುವುದರಿಂದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ದೇಹದ ಅರೋಗ್ಯಕ್ಕೂ ಮನಸ್ಸಿನ ಆರೋಗ್ಯಕ್ಕೂ ಮುದ ಕೊಡುವ ಕೆಲವು ಗಿಡಗಳು ಯಾವುವು ಎಂಬುದನ್ನು ನೋಡೋಣ.
ತುಳಸಿ ಗಿಡದಲ್ಲಿ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುವ ಗುಣವಿದೆ. ಪೂಜನೀಯ ಎಂಬ ಧಾರ್ಮಿಕ ಉದ್ದೇಶದ ಹೊರತಾಗಿಯೂ ತುಳಸಿ ಗಿಡವನ್ನು ನೆಟ್ಟು ಬೆಳೆಸುವುದು ಬಹಳ ಒಳ್ಳೆಯದು.

ಮಲ್ಲಿಗೆ ಅರಳುವಾಗ ಸುಗಂಧವನ್ನು ಬೀರುವುದು ಮಾತ್ರವಲ್ಲ ಮನಸ್ಸಿಗೆ ತಾಜಾತನ ತುಂಬುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ಮಲ್ಲಿಗೆ ಗಿಡಕ್ಕೂ ಜಾಗವಿರಲಿ.

ಲೋಳೆಸರ ಸೌಂದರ್ಯಕ್ಕೂ ಔಷಧಕ್ಕೂ ಬಳಕೆಯಾಗುವ ಅಪರೂಪದ ಗಿಡ. ಇದು ವಾತಾವರಣಕ್ಕೆ ಹೆಚ್ಚಿನ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.

ಸಾಮ್ರಾಣಿ ಗಿಡ ಅಥವಾ ಸಾಂಬಾರಬಳ್ಳಿಯನ್ನು ಬೆಳೆಸುವುದರಿಂದ ಮಕ್ಕಳಿಗೆ ಶೀತವಾದಾಗ ರಸ ತೆಗೆದು ಕುಡಿಸಲೂ ಪ್ರಯೋಜನವಾಗುತ್ತದೆ. ತಕ್ಷಣಕ್ಕೆ ತಂಬುಳಿ, ಚಟ್ನಿಯಂಥ ಅಡುಗೆ ತಯಾರಿಗೂ ಇದು ನೆರವಾಗುತ್ತದೆ.

ಮನಸ್ಸಿಗೆ ಸಮಾಧಾನ ನೀಡುವ ಲ್ಯಾವೆಂಡರ್ ಗಿಡದ ಪರಿಮಳದಿಂದ ಉತ್ತಮ ನಿದ್ದೆ ಪಡೆಯಲು ಸಾಧ್ಯ ಎನ್ನುತ್ತವೆ ಹಲವು ಅಧ್ಯಯನಗಳು. ಹೀಗಾಗಿ ಇದನ್ನೂ ಮನೆಯ ಬಳಿ ಬೆಳೆಸಿ. ಪುದೀನಾ ಸೊಪ್ಪು ಕೂಡಾ ದಿನವಿಡಿ ಮನಸ್ಸನ್ನು ಆಹ್ಲಾದಕರವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಇದನ್ನು ನಿಮ್ಮ ಕಚೇರಿಯ ಮೇಜಿನ ಮೇಲೆ ಅಥವಾ ಮಲಗುವ ಕೊಠಡಿಯಲ್ಲೂ ಇಟ್ಟುಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...