alex Certify ಜಿಯೋ, ಏರ್ಟೆಲ್‌ಗೆ ಗಾಬರಿ ಹುಟ್ಟಿಸಿದೆ BSNLನ ಅಗ್ಗದ ಪ್ಲಾನ್‌: 2000 GB ಡೇಟಾ ಮತ್ತು OTT ಚಂದಾದಾರಿಕೆ ಉಚಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ, ಏರ್ಟೆಲ್‌ಗೆ ಗಾಬರಿ ಹುಟ್ಟಿಸಿದೆ BSNLನ ಅಗ್ಗದ ಪ್ಲಾನ್‌: 2000 GB ಡೇಟಾ ಮತ್ತು OTT ಚಂದಾದಾರಿಕೆ ಉಚಿತ

BSNLನ  ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳು ಗ್ರಾಹಕರಿಗೆ ಇಷ್ಟವಾಗುವಂತಿವೆ. ಏಕೆಂದರೆ ಅವುಗಳ ವೆಚ್ಚ ಕಡಿಮೆ ಮತ್ತು  ಪ್ರಯೋಜನ ಸಾಕಷ್ಟಿರುತ್ತದೆ. ಅಂಥದ್ದೇ ಹೊಸದೊಂದು ಯೋಜನೆ ಈಗ ಜಿಯೋ, ಏರ್ಟೆಲ್‌ನಂತಹ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೇ ಗಾಬರಿ ಹುಟ್ಟಿಸಿದೆ.

BSNLನ ಈ ಪ್ಲಾನ್ ಬೆಲೆ  775 ರೂಪಾಯಿ. ಈ ಯೋಜನೆಯಲ್ಲಿ ನಿಮಗೆ BSNL ಭಾರತ್ ಫೈಬರ್ 75 ದಿನಗಳವರೆಗೆ ಇಂಟರ್ನೆಟ್‌ ಸೇವೆಯನ್ನು ನೀಡುತ್ತದೆ. ಈ ಕೊಡುಗೆಯನ್ನು ಸೀಮಿತ ಅವಧಿಯಲ್ಲಿ ಮಾತ್ರ ಖರೀದಿಸಬಹುದು. ನೀವು ಈ ಯೋಜನೆಯನ್ನು ಸಕ್ರಿಯಗೊಳಿಸಲು ಬಯಸಿದರೆ ನಿಮಗೆ ನವೆಂಬರ್ 15ರವರೆಗೆ ಮಾತ್ರ ಅವಕಾಶವಿದೆ. ಈ ಪ್ಲಾನ್ ನಲ್ಲಿ ಹಲವು ವಿಶೇಷತೆಗಳಿವೆ. ಪ್ರತಿ ತಿಂಗಳು 2 ಜಿಬಿ ಡೇಟಾವನ್ನು ಬಳಕೆದಾರರಿಗೆ ನೀಡಲಾಗುತ್ತಿದೆ.

ಹೈ ಸ್ಪೀಡ್‌ ಇಂಟರ್ನೆಟ್‌ ಅನ್ನು ಗ್ರಾಹಕರು ಬಳಸಿಕೊಳ್ಳಬಹುದು. 2 ಟಿಬಿ ಡೇಟಾ ಖಾಲಿಯಾದ ಮೇಲೆ ಮುಂದೇನು ಎಂಬ ಪ್ರಶ್ನೆ ಸಹಜ. ಡೇಟಾ ಮುಗಿದ ನಂತರವೂ ಗ್ರಾಹಕರು ಇಂಟರ್ನೆಟ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಏಕೆಂದರೆ ಅದು ಅನಿಯಮಿತ. ಆದರೆ ಇಂಟರ್ನೆಟ್‌ ವೇಗ 10 Mbps ಗೆ ಕಡಿಮೆಯಾಗುತ್ತದೆ. ಇಷ್ಟೇ ಅಲ್ಲ, ಈ ಪ್ಲಾನ್‌ ಅನ್ನು ರೀಚಾರ್ಜ್‌ ಮಾಡಿಕೊಂಡಲ್ಲಿ SonyLIV, G5 ಮತ್ತು Voot ನಂತಹ ಅನೇಕ ಪ್ಲಾಟ್‌ಫಾರ್ಮ್‌ಗಳನ್ನು ಒಳಗೊಂಡಂತೆ ಉಚಿತವಾಗಿ ನೀವು OTT ಚಂದಾದಾರಿಕೆಗಳನ್ನು ಪಡೆಯಬಹುದು. ಇದಕ್ಕಾಗಿ ಗ್ರಾಹಕರು ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...