alex Certify ಈ ಗ್ರಾಮಕ್ಕೆ ಶಿಫ್ಟ್‌ ಆದರೆ ಸಾಕು ಸಿಗುತ್ತೆ ಲಕ್ಷಾಂತರ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಗ್ರಾಮಕ್ಕೆ ಶಿಫ್ಟ್‌ ಆದರೆ ಸಾಕು ಸಿಗುತ್ತೆ ಲಕ್ಷಾಂತರ ರೂ.

ಇಟಲಿಯ ಈ ಗ್ರಾಮಕ್ಕೆ ನೀವು ಸಕುಟುಂಬ ಸಮೇತ ಶಿಫ್ಟ್​ ಆಗುತ್ತೀರಾ ಅಂದರೆ ನಿಮಗೆ 24.5 ಲಕ್ಷ ರೂಪಾಯಿ ಸಿಗಲಿದೆ..!

ಅರೆ..! ಮನೆ ಖರೀದಿ ಮಾಡೋಕೆ ಹಣ ಕೊಡಬೇಕು ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೇನಿದು ಮನೆ ಕೊಟ್ಟಿದ್ದು ಮಾತ್ರವಲ್ಲದೇ ಮೇಲಿಂದ ಅವರೇ 24.5 ಲಕ್ಷ ರೂಪಾಯಿ ನೀಡ್ತಾರೆ ಎಂದು ಯೋಚನೆ ಮಾಡುತ್ತಿದ್ದೀರಾ..? ವಿಚಾರ ಇರೋದೇ ಇಲ್ಲಿ. ಇಟಲಿಯ ಈ ನಗರದಲ್ಲಿ ನಿಮಗೆ ಈ ರೀತಿಯ ಕೊಡುಗೆ ಸಿಗಲಿದೆ.

ಕಳೆದ ಕೆಲ ವರ್ಷಗಳಿಂದ ಇಟಲಿಯ ಕೆಲ ಪಟ್ಟಣಗಳು ಜನಸಂಖ್ಯೆಯ ಕೊರತೆಯನ್ನ ಅನುಭವಿಸುತ್ತಿದೆ. ಹೀಗಾಗಿ ತಮ್ಮ ಊರುಗಳಿಗೆ ಜನರನ್ನ ಆಕರ್ಷಿಸಬೇಕು ಎಂಬ ಕಾರಣಕ್ಕೆ ತರಹೇವಾರಿ ಕೊಡುಗೆಗಳನ್ನ ನೀಡಲಾಗ್ತಿದೆ.

ಕೆಲ ತಿಂಗಳ ಹಿಂದಷ್ಟೇ ಇಟಲಿಯ ಬ್ಯಾಸಿಲಿಸಾಟಾ ಎಂಬ ನಗರವು ಕೇವಲ 1 ಯುರೋ ಅಂದರೆ 88.52 ರೂಪಾಯಿಗೆ ಮನೆ ಮಾರಾಟ ಮಾಡಿತ್ತು. ಈಗ ಅದೇ ರೀತಿ ಮತ್ತೊಂದು ಗ್ರಾಮವು ತಮ್ಮ ಊರಿಗೆ ಜನರನ್ನ ಆಕರ್ಷಿಸುವ ಸಲುವಾಗಿ ಈ ಆಫರ್​ ನೀಡಿದೆ.

ಈ ಆಫರ್​ನ ಪ್ರಕಾರ ಕ್ಯಾಲಾಬ್ರಿಯಾ ಗ್ರಾಮಕ್ಕೆ ಬರುವವರಿಗೆ 24.5 ಲಕ್ಷ ರೂಪಾಯಿ ಸಿಗಲಿದೆ. ಆದರೆ ಇಲ್ಲಿ ಮನೆ ತೆಗೆದುಕೊಳ್ಳುವವರ ವಯಸ್ಸು 40 ವರ್ಷಕ್ಕಿಂತ ಕಡಿಮೆ ಇರಬೇಕು. ಹಾಗೂ ಅವರು ಈ ಗ್ರಾಮದಲ್ಲಿ ಆರ್ಥಿಕ ಪರಿಸ್ಥಿತಿಯನ್ನ ಉತ್ತೇಜಿಸುವ ಸಲುವಾಗಿ ಇಲ್ಲೇ ಏನಾದರೂ ಉದ್ಯಮವನ್ನ ಆರಂಭಿಸಬೇಕು. ಈ ಗ್ರಾಮಕ್ಕೆ ಶಿಫ್ಟ್​ ಆಗಬಯಸುವವರು 90 ದಿನಗಳ ಅವಧಿಯಲ್ಲಿ ಅರ್ಜಿಯನ್ನ ತುಂಬಿ ಇಲ್ಲಿಗೆ ಎಂಟ್ರಿ ಕೊಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...