alex Certify ನಿಮ್ಮ ಮೊಗದಲ್ಲಿ ಕಿರುನಗೆ ಮೂಡಿಸುತ್ತೆ ಪ್ರೀ-ಸ್ಕೂಲ್‌ ಪಾರ್ಕಿಂಗ್‌ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮೊಗದಲ್ಲಿ ಕಿರುನಗೆ ಮೂಡಿಸುತ್ತೆ ಪ್ರೀ-ಸ್ಕೂಲ್‌ ಪಾರ್ಕಿಂಗ್‌ ಫೋಟೋ

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಫೋಟೋ ಇದು, ಅದಕ್ಕೊಂದು ಚಿಕ್ಕಚೊಕ್ಕ ಶೀರ್ಷಿಕೆ – “ಪ್ರೀ-ಸ್ಕೂಲ್‌ ಪಾರ್ಕಿಂಗ್‌- ವೆನಿಸ್‌”.

ಹೌದು, ಸಂಚಾರ ದಟ್ಟಣೆ ಅನುಭವಿಸುತ್ತಿರುವ ಪ್ರತಿ ನಗರವಾಸಿಗಳ ಗಮನ ಸೆಳೆದಿದೆ ಈ ಫೋಟೋ. ಇದೊಂಥರಾ ಹೃದಯ ತಟ್ಟುವಂತಿದ್ದು, ಮುಖದಲ್ಲಿ ಕಿರುನಗೆ ಮೂಡಿಸುವ ದೃಶ್ಯ ಫೋಟೋದಲ್ಲಿದೆ. ಇದನ್ನು ಕಂಪ್ಯೂಟರ್‌ ತಜ್ಞ ಪೌಲ್‌ ಗ್ರಹಾಂ ಎಂಬುವವರು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ಧಾರೆ. ಅದು ವೈರಲ್‌ ಆಗಿದೆ.

ವೆನಿಸ್‌ನ ಪ್ರಿ-ಸ್ಕೂಲ್ ಪಾರ್ಕಿಂಗ್‌ನಲ್ಲಿ ಮಕ್ಕಳ ಕಲರ್‌ ಕಲರ್‌ ಸ್ಕೂಟರ್‌ಗಳನ್ನು ಒಂದೇ ಸಾಲಿನಲ್ಲಿ ಅಚ್ಚುಕಟ್ಟಾಗಿ ನಿಲ್ಲಿಸಿರುವ ದೃಶ್ಯ ಮನಮುಟ್ಟುವಂತೆ ಇದೆ. ಈ ಫೋಟೋ ಖಂಡಿತವಾಗಿಯೂ ನಿಮ್ಮ ಮೆಚ್ಚುಗೆಗೂ ಪಾತ್ರವಾಗಬಹುದು. ಒಮ್ಮೆ ಗಮನಿಸಿ ನೋಡಿ

BIG NEWS: ವಿ.ಹೆಚ್.ಪಿ.ಯಿಂದ ಶ್ರೀರಂಗಪಟ್ಟಣ ಚಲೋ; ನಿಷೇಧಾಜ್ಞೆ ಉಲ್ಲಂಘಿಸಿದರೆ ಕಾನೂನು ಕ್ರಮ; ಎಸ್ ಪಿ ಎಚ್ಚರಿಕೆ

ಈ ಫೋಟೋ ಬಹುಬೇಗ ವೈರಲ್‌ ಆಗಿದ್ದು, ತರಹೇವಾರಿ ಪ್ರತಿಕ್ರಿಯೆಗಳು ಈ ಫೋಟೋ ಕೆಳಗೆ ಕಮೆಂಟ್‌ ವಿಭಾಗದಲ್ಲಿ ಮತ್ತು ಅದನ್ನು ಮರುಶೇರ್‌ ಮಾಡುವಾಗ ಅನೇಕರು ಹಾಕಿದ್ದಾರೆ.

ಕೆಲವರು ಇದನ್ನು ಮುದ್ದಾಗಿ ಕಂಡರೆ, ಇನ್ನು ಕೆಲವರು ದೊಡ್ಡವರಿಗೆ ಇದು ಒಳ್ಳೆಯ ಪಾಠ ಎಂದು ಪ್ರತಿಕ್ರಿಯಿಸಿದ್ದಾರೆ. ಕಾಮೆಂಟ್‌ಗಳಿಗೆ ಇಲ್ಲಿ ಗಮನಿಸಿ:

https://twitter.com/soul_of_stone04/status/1532060193278017537?ref_src=twsrc%5Etfw%7Ctwcamp%5Etweetembed%7Ctwterm%5E1532060193278017537%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-pic-of-pre-school-parking-in-venice-is-the-cutest-thing-on-the-internet-today-it-s-viral-1958060-2022-06-03

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...