alex Certify ವಿಶ್ವದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಿಸಿದೆ ಪಾಕಿಸ್ತಾನದ ಈ ನಗರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದಲ್ಲೇ ಅತಿ ಹೆಚ್ಚು ತಾಪಮಾನ ದಾಖಲಿಸಿದೆ ಪಾಕಿಸ್ತಾನದ ಈ ನಗರ..!

ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಲ್ಲಿರುವ ಹಾಗೂ 2 ಲಕ್ಷ ಜನಸಂಖ್ಯೆಯನ್ನ ಹೊಂದಿರುವ ಜಾಕೋಬಾಬಾದ್​ ಎಂಬ ಹೆಸರಿನ ನಗರವು ತನ್ನ ಅತಿಯಾದ ಉಷ್ಣಾಂಶದ ಕಾರಣದಿಂದ ವಿಶ್ವ ಮಟ್ಟದಲ್ಲಿ ಸುದ್ದಿ ಮಾಡಿದೆ. ಬೇಸಿಗೆ ಕಾಲದಲ್ಲಿ ಸೂರ್ಯನು ಅತೀ ಹತ್ತಿರ ಬಂದಿದ್ದರಿಂದ ಈ ಪ್ರದೇಶದಲ್ಲಿ ಬರೋಬ್ಬರಿ 52 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನ ದಾಖಲಾಗಿದೆ.

ಈ ವಿಚಾರವಾಗಿ ಮಾತನಾಡಿದ ಅಂಗಡಿಯೊಂದರ ಮಾಲೀಕ ಅಬ್ದುಲ್​ ಬಖಿ, ಇಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್​ ದಾಟುತ್ತಿದ್ದಂತೆಯೇ ಜನರು ಮನೆಯಿಂದ ಹೊರಗೆ ಬರೋದೇ ಇಲ್ಲ. ಹೀಗಾಗಿ ಇಲ್ಲಿನ ಬೀದಿಗಳೆಲ್ಲ ನಿರ್ಜನವಾಗಿರುತ್ತದೆ. ಇಲ್ಲಿನ ಉಷ್ಣಾಂಶ ಯಾವ ಪ್ರಮಾಣದಲ್ಲಿ ಇರುತ್ತೆ ಅಂದರೆ ನಿಮ್ಮ ಪಾದಗಳನ್ನ ನೆಲಕ್ಕೆ ಊರಲು ಸಾಧ್ಯವಾಗೋದಿಲ್ಲ ಎಂದು ಹೇಳಿದ್ರು.

ಅಲ್ಲದೇ ಈ ಸಂದರ್ಭದಲ್ಲಿ ನಗರದ ಬಹುತೇಕ ಆಸ್ಪತ್ರೆಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತದೆ. ಜೀವನೋಪಾಯಕ್ಕಾಗಿ ಮನೆಯಿಂದ ಹೊರಗೆ ಬರಲೇಬೇಕಾದ ಅನಿವಾರ್ಯತೆ ಹೊಂದಿದವರು ಶಾಖ ಉಗುಳುವ ಸೂರ್ಯನ ರುದ್ರ ನರ್ತನಕ್ಕೆ ಬಲಿಯಾಗ್ತಾರೆ.

ಈ ಭಾಗದಲ್ಲಿ ವಾಸಿಸುವ ಬಹುತೇಕ ಕುಟುಂಬಗಳು ಬಡತನ ರೇಖೆಯಲ್ಲಿ ಬರುತ್ತದೆ. ಹೀಗಾಗಿ ಅವರಿಗೆ ಬೇರೆ ಕಡೆ ಹೋಗಲು ಸಾಧ್ಯವಾಗೋದಿಲ್ಲ. ನಾನು ಸಹ ಈ ಊರಿನಿಂದ ವಲಸೆ ಹೋಗೋಣ ಎಂದುಕೊಂಡೆ, ಆದರೆ ಎಲ್ಲಿ ಹೋಗಲಿ ಎಂದು ತಿಳಿಯಲಿಲ್ಲ ಎಂದು ವ್ಯಾಪಾರಿಯೊಬ್ಬರು ತಮ್ಮ ಕಷ್ಟ ತೋಡಿಕೊಂಡರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...