alex Certify ಶೌಚಾಲಯದಲ್ಲಿ ನೀವು ಮಾಡುವ ಈ ತಪ್ಪು ಕೆಡಿಸಬಲ್ಲದು ನಿಮ್ಮ ಆರೋಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೌಚಾಲಯದಲ್ಲಿ ನೀವು ಮಾಡುವ ಈ ತಪ್ಪು ಕೆಡಿಸಬಲ್ಲದು ನಿಮ್ಮ ಆರೋಗ್ಯ

ಮೊದಲೆಲ್ಲ ಜನರು ತಮ್ಮ ಸಮಯ ಉಳಿತಾಯ ಮಾಡೋದಕ್ಕಾಗಿ ಶೌಚಾಲಯಕ್ಕೆ ಹೋಗುವ ವೇಳೆ ದಿನ ಪತ್ರಿಕೆಗಳನ್ನ ತೆಗೆದುಕೊಂಡು ಹೋಗ್ತಿದ್ರು. ಇದೀಗ ಈ ಜಾಗವನ್ನ ಸ್ಮಾರ್ಟ್​ ಫೋನ್​ಗಳು ಪಡೆದುಕೊಂಡಿವೆ. ಮೊಬೈಲ್​ ಫೋನ್​ಗಳನ್ನ ಬಳಕೆ ಮಾಡುತ್ತಾ ಮಾಡುತ್ತಾ ಜನರು ತಾಸುಗಟ್ಟಲೇ ಸಮಯವನ್ನ ಶೌಚಾಲಯದಲ್ಲೇ ಕಳೆದು ಬಿಡ್ತಾರೆ. ವಾಟ್ಸಾಪ್​, ಫೇಸ್​ಬುಕ್​, ಇನ್​ಸ್ಟಾಗ್ರಾಂ, ಟ್ವಿಟರ್​ ಅಂತಾ ಸಮಯ ಸರಿದಿದ್ದೇ ತಿಳಿಯೋದಿಲ್ಲ. ಆದರೆ ನೆನಪಿಡಿ ಈ ಅಭ್ಯಾಸದಿಂದಾಗಿ ನೀವು ಕೆಟ್ಟ ಕಾಯಿಲೆಗಳನ್ನ ಬರ ಮಾಡಿಕೊಳ್ಳುತ್ತಿದ್ದೀರಾ..!

ಮನೆಯ ಎಲ್ಲಾ ಸ್ಥಳಗಳಿಗಿಂತ ಹೆಚ್ಚಿನ ಸೂಕ್ಷ್ಮ ಜೀವಿಗಳು ಶೌಚಾಲಯದಲ್ಲೇ ಸ್ಥಾನ ಪಡೆದಿರುತ್ತವೆ. ಹೀಗಾಗಿ ಈ ಸ್ಥಳಕ್ಕೆ ನೀವು ಮೊಬೈಲ್​ ಕೊಂಡೊಯ್ದರೆ ನಿಮ್ಮ ಮೊಬೈಲ್​ ಕೂಡ ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬರುತ್ತೆ. ಶೌಚಾಲಯದ ಬಾಗಿಲು, ಫ್ಲಶ್​, ಅಲ್ಲಿರುವ ಬಕೆಟ್​ಗಳನ್ನ ಮುಟ್ಟಿದ ಕೈಯಲ್ಲೇ ನೀವು ಮೊಬೈಲ್​ ಮುಟ್ಟೋದ್ರಿಂದ ಸಲ್ಮೋನೆಲ್ಲಾ, ಇ -ಕೊಲಿ, ಸಿ – ಡಿಫಿಸೈಲ್​ನಂತಹ ಮಾರಕ ಸೂಕ್ಷ್ಮಾಣು ಜೀವಿಗಳು ನಿಮ್ಮ ಸಂಪರ್ಕಕ್ಕೆ ಬರುತ್ತೆ.

ಶೌಚಾಲಯದಲ್ಲಿ ಮೊಬೈಲ್​ ಬಳಕೆ ಮಾಡೋದು ಆರೋಗ್ಯಕ್ಕೆ ಎಷ್ಟು ಹಾನಿಕರ ಅನ್ನೋದನ್ನ ನೀವು ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಶೌಚಾಲಯಕ್ಕೆ ಮೊಬೈಲ್​ ತೆಗೆದುಕೊಂಡು ಹೋಗುವವರು ಹೆಚ್ಚಿನ ಸಮಯವನ್ನ ಅಲ್ಲೇ ಕಳೆಯುತ್ತಾರೆ. ಇದರಿಂದ ರಕ್ತಸ್ರಾವದ ಸಮಸ್ಯೆ ಉಂಟಾಗಬಹುದು. ಅಲ್ಲದೇ ಗುದದ್ವಾರದಲ್ಲಿ ನೋವು, ಊದಿಕೊಳ್ಳುವುದು ಹೀಗೆ ನಾನಾ ಸಮಸ್ಯೆಗಳು ಉಂಟಾಗುತ್ತದೆ.

ಟಾಯ್ಲೆಟ್​ ಹೋಗಿ ಬಂದ ಬಳಿಕ ಕೈಯನ್ನ ತೊಳೆದುಕೊಳ್ಳಬಹುದು. ಹಾಗಂತ ಮೊಬೈಲ್​ನ್ನು ತೊಳೆಯೋಕೆ ಸಾಧ್ಯವಿಲ್ಲ. ಹೀಗಾಗಿ ಆದಷ್ಟು ಅಭ್ಯಾಸವನ್ನ ಕೊನೆ ಮಾಡಿ. ಒಂದು ವೇಳೆ ಮೊಬೈಲ್​ ತೆಗೆದುಕೊಂಡು ಹೋಗಲೇಬೇಕಾದ ಪರಿಸ್ಥಿತಿ ಬಂತು ಅಂದರೆ ಆಲ್ಕೋಹಾಲ್​ ಅಂಶವುಳ್ಳ ಸ್ಯಾನಿಟೈಸರ್​ನಿಂದ ವಾಶ್​ ಮಾಡಿ. ಶೌಚಾಲಯದಲ್ಲಿ 10 ನಿಮಿಷಕ್ಕಿಂತ ಹೆಚ್ಚು ಕಾಲ ಇರಲೇಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...