alex Certify ತಂದೆ ಹೇಳಿದ ಆ ಒಂದು ಶಬ್ದ ಕೇಳಿ ಮನಸಾರೆ ನಕ್ಕ ಪುಟ್ಟ ಬಾಲಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಹೇಳಿದ ಆ ಒಂದು ಶಬ್ದ ಕೇಳಿ ಮನಸಾರೆ ನಕ್ಕ ಪುಟ್ಟ ಬಾಲಕ…!

ಮೊದಲ ದಿನ ಶಾಲೆಗೆ ಹೋಗುವುದು ಯಾವುದೇ ಮಗುವಿಗೆ ದುಃಖದ ಅನುಭವ. ಬಹುತೇಕ ಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಾರೆ. ಇದರಿಂದ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಹೋಗುವಂತೆ ಮನವೊಲಿಸಲು ಹಲವು ಕಸರತ್ತುಗಳನ್ನು ಮಾಡುತ್ತಾರೆ.

ಕೆಲವರು ತಾಳ್ಮೆ ಕಳೆದುಕೊಂಡು ಒಂದೆರಡು ಏಟು ಕೂಡ ಹೊಡೆದು ಬಿಡುತ್ತಾರೆ. ಆದರೆ ಆದರೆ, ಒಬ್ಬ ವ್ಯಕ್ತಿ ತನ್ನ ಮಗನನ್ನು ನಗಿಸಲು ತುಂಬಾ ಸರಳವಾದ ಉಪಾಯವನ್ನು ಕಂಡುಕೊಂಡಿದ್ದಾನೆ. ಅದನ್ನು ಅವರೇ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈಗ ಆ ಪೋಸ್ಟ್ ವೈರಲ್ ಆಗಿದೆ.

ತಂದೆ, ಮಗನ ಪಾಲಿಗೆ ಯಾವತ್ತಿಗೂ, ಒಂದು ಉತ್ತಮ ಗೆಳೆಯ ಅನ್ನೊದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ. ಓರ್ವ ವ್ಯಕ್ತಿ ತನ್ನ ಮಗ ಶಾಲೆಗೆ ಹೊರಟ ಮೊದಲ ದಿನ, ಶಾಲೆಗೆ ಹೋಗುವ ಮುನ್ನ ಮಗನ ಫೋಟೋ ತೆಗೆಯಲು ಮುಂದಾಗಿದ್ದಾರೆ.

ಅಪ್ಪ ಸ್ಮೈಲ್ ಅಂತ ಹೇಳಿದರೂ ಆತನ ನಗು ಕೃತಕ ಅನ್ನುವ ರೀತಿಯಲ್ಲಿತ್ತು. ಮೊದಲ ಫೋಟೋದಲ್ಲಿ, ಹುಡುಗ ಪೂರ್ಣ ಹೃದಯದಿಂದ ನಗುತ್ತಿರಲಿಲ್ಲ. ನಂತರ ಆತ “ಪೂಪ್” ಎಂದು ಜೋರಾಗಿ ಕೂಗಿ ಮಗ ಹೃದಯದಿಂದ ನಗುವಂತೆ ಮಾಡುತ್ತಾರೆ. ಅವರು ಈ ಎರಡು ಫೋಟೋಗಳನ್ನು ಒಟ್ಟಿಗೆ ಟ್ವೀಟ್ ಮಾಡಿದಾಗ ಅದು ವೈರಲ್ ಆಗಿದೆ.

ಈ ಪೋಸ್ಟ್ ನೆಟ್ಟಿಗರನ್ನು ತುಂಬಾ ಆಕರ್ಷಿಸುತ್ತಿದೆ. ಈ ಟ್ರಿಕ್ ತುಂಬಾ ಚೆನ್ನಾಗಿದೆ ಎಂದು ಹಲವರು ಕಾಮೆಂಟ್ ಮಾಡಿರುವುದು ಗಮನಾರ್ಹ. ಇನ್ನು ಕೆಲವರು ಇದೇ ಟ್ರಿಕ್ ಅನ್ನು ತಮ್ಮ ಮಕ್ಕಳಿಗೂ ಅನ್ವಯಿಸಿ ಎಂದು ಕಾಮೆಂಟ್ಸ್ ಮಾಡಿರುವುದು ಗಮನಾರ್ಹ. ಮತ್ತು ಮಕ್ಕಳ ಸುಂದರ ಫೋಟೋಗಳ ಹಿಂದೆ ಪೋಷಕರ ಕಷ್ಟಗಳು ಹೀಗಿವೆ ಎಂದು ಕೆಲವರು ಕಾಮೆಂಟ್ ಮಾಡುತ್ತಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...