alex Certify ಭಾರತೀಯ ಯೋಧರಿಂದಲೇ ನಡೆಯುತ್ತೆ ಈ ಕೆಫೆ: ’10 ಸ್ಟಾರ್’ ರೇಟಿಂಗ್‌ ನೀಡಿದ ಆನಂದ್ ಮಹೀಂದ್ರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಯೋಧರಿಂದಲೇ ನಡೆಯುತ್ತೆ ಈ ಕೆಫೆ: ’10 ಸ್ಟಾರ್’ ರೇಟಿಂಗ್‌ ನೀಡಿದ ಆನಂದ್ ಮಹೀಂದ್ರಾ….!

ಉದ್ಯಮಿ, ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಸದಾ ಸಕ್ರಿಯ. ಅಚ್ಚರಿ ದಾಯಕ‌ ಹಾಗೂ ಪಾಸಿಟಿವ್ ವಿಚಾರಗಳನ್ನು ಬಿತ್ತರಿಸಿ ಗಮನ ಸೆಳೆಯುತ್ತಿತ್ತಾರೆ.

ಇದೀಗ ಭಾರತೀಯ ಸೇನೆಯು ಗುರೆಜ್ ಕಣಿವೆಯಲ್ಲಿ ನಡೆಸುವ ಕೆಫೆಯ ವೀಡಿಯೊವನ್ನು ಅವರು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಆಕರ್ಷಕ ಶಿರ್ಷಿಕೆ ನೀಡಿದ್ದಾರೆ. “ಈ ಕೆಫೆ 5 ಸ್ಟಾರ್ ಅಥವಾ 7 ಸ್ಟಾರ್ ಅಲ್ಲ, 10 ಸ್ಟಾರ್!” ಎಂಬ ಅವರ ಸಾಲು‌ ಆ ಕೆಫೆಯ ಮಹತ್ವ ಎತ್ತಿ ತೋರಿಸಿದೆ.‌

ವೀಡಿಯೊದಲ್ಲಿ ಹುಡುಗಿಯೊಬ್ಬಳು ಕೆಫೆ ಟೂರ್ ನಡೆಸುವುದನ್ನು ಕಾಣಬಹುದು, ಅಲ್ಲಿನ ವೈವಿಧ್ಯತೆಯನ್ನು ತೋರಿಸುತ್ತಾ ಕೆಫೆಯಲ್ಲಿ ನೀಡಲಾಗುವ ಆಹಾರ ಮತ್ತು ಪಾನೀಯಗಳ ಬಗ್ಗೆ ವಿವರಿಸುತ್ತಾಳೆ‌.

BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್‌ ಕುಸಿತ

ಈ ವಿಡಿಯೋ ಅಪ್‌ಲೋಡ್ ಮಾಡಿದ ನಂತರ, 500ಕೆ ವೀಕ್ಷಣೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಇದು ಸುಮಾರು 19ಕೆ ಲೈಕ್ ಪಡೆದುಕೊಂಡಿದೆ. ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

“ಅರುಣಾಚಲ ಪ್ರದೇಶದ ನನ್ನ ಸಂಪೂರ್ಣ ಪ್ರವಾಸದಲ್ಲಿ ಶಾಪಿಂಗ್, ಪ್ರವಾಸೋದ್ಯಮ‌ ಮತ್ತು ಕೆಫೆಯನ್ನು ಕಂಡು ಆನಂದಿಸಿದ್ದೇವೆ. ನಾವು ಇತರ ಅಂಗಡಿಗಳಿಗಿಂತ ಸೇನೆಯ ಔಟ್‌ಲೆಟ್‌ ಬಗ್ಗೆ ನಾವು ಗಮನಹರಿಸಿದ್ದೆವು” ಎಂದು ಒಬ್ವರು ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...