alex Certify ಔಷಧೋಪಚಾರವಿಲ್ಲದೆ ಗುಣವಾಯ್ತು 12 ವರ್ಷಗಳ ʼಮೈಗ್ರೇನ್‌ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಔಷಧೋಪಚಾರವಿಲ್ಲದೆ ಗುಣವಾಯ್ತು 12 ವರ್ಷಗಳ ʼಮೈಗ್ರೇನ್‌ʼ

60 ವರ್ಷದ ವೃದ್ಧರೊಬ್ಬರಿಗೆ ತಿಂಗಳಿಗೆ 6-8 ಬಾರಿ ಮೈಗ್ರೇನ್‌ (ತೀವ್ರತರ ತಲೆನೋವು) ವಿಪರೀತವಾಗಿ ಬಾಧಿಸುತ್ತಿತ್ತು. ಇದರಿಂದಾಗಿ ಅವರ ಜೀವನವೇ ನರಕ ಸದೃಶವಾಗಿತ್ತು. ಇಳಿವಯಸ್ಸಿನಲ್ಲಿ ಮಾತ್ರವಲ್ಲದೇ ಯೌವ್ವನಾವಸ್ಥೆಯಲ್ಲಿ ಅವರು ಫೋಟೋಗ್ರಾಫರ್‌ ವೃತ್ತಿ ಮಾಡುತ್ತಿದ್ದಾಗಲೂ ಮೈಗ್ರೇನ್‌ ಕಾಟ ತಪ್ಪಿರಲಿಲ್ಲ.

ಹಲವು ವೈದ್ಯರು ವಿವಿಧ ಔಷಧೋಪಚಾರ ಮಾಡಿದರೂ ತಲೆನೋವು ಕಡಿಮೆಯಾಗಿರಲಿಲ್ಲ. ಬಹುಪಾಲು ಜೀವನವಿಡೀ ಬಾಧಿಸಿದ ಈ ಕಾಯಿಲೆಯನ್ನು ಬಗ್ಗುಬಡಿಯುವ ಹಠಕ್ಕೆ ವೃದ್ಧರು ಬಿದ್ದಿದ್ದರು. ಈ ವೇಳೆ ಅವರಿಗೆ ಸ್ನೇಹಿತರೊಬ್ಬರಿಂದ ಔಷಧ ರಹಿತ ಹಾಗೂ ಪೂರ್ಣವಾಗಿ ಸಸ್ಯಗಳನ್ನೇ ಆಧರಿಸಿದಂತಹ ಆಹಾರ ಪದ್ಧತಿಯೊಂದರ ಖಾಯಿಲೆ ಗುಣಪಡಿಸುವ ಶಕ್ತಿಯ ಬಗ್ಗೆ ಪರಿಚಯವಾಯಿತು.

ಈ ಡಯೆಟ್‌ ಅಥವಾ ಆಹಾರ ಪದ್ಧತಿಯ ಹೆಸರು ’’ಲೈಫ್‌’’ (ಲೋ ಇನ್‌ಫ್ಲಮೇಟರಿ ಫುಡ್ಸ್‌ ಎವರಿಡೇ).

ಒಂದು ಬಾರಿ ಮೈಗ್ರೇನ್‌ ಶುರುವಾಯಿತು ಎಂದರೆ ಕನಿಷ್ಠ 75 ಗಂಟೆಗಳವರೆಗೆ ಬಿಡದೆ ಬಾಧಿಸುತ್ತಿತ್ತು. ತಲೆನೋವಿನಿಂದಾಗಿ ಕುಟುಂಬದವರು, ಸ್ನೇಹಿತರೊಂದಿಗೆ ಬೆರೆಯುವುದು ಕಷ್ಟವಾಗಿತ್ತು. ಮೂರು ದಿನಗಳು ಬಹಳ ತ್ರಾಸದಾಯಕವಾಗಿ ಕಳೆಯಬೇಕಿತ್ತು. ಈ ವೇಳೆ ಲೈಫ್‌ ಡಯೆಟ್‌ ಶುರು ಮಾಡಿದೆ. ಇದರಲ್ಲಿ ಕೇವಲ ಗಾಢ ಹಸಿರು ಬಣ್ಣದ ತರಕಾರಿಗಳ ಸೇವನೆ ಮಾತ್ರವೇ ಮಾಡಬೇಕು. ಬೇರೆ ಪೂರಕ ಆಹಾರಗಳು ಅಥವಾ ಮೈಗ್ರೇನ್‌ ನಿಯಂತ್ರಣಕ್ಕೆ ಸಂಬಂಧಿತ ಔಷಧಗಳನ್ನು ಯಾವುದನ್ನೂ ಕೂಡ ಸೇವನೆ ಮಾಡುವಂತಿಲ್ಲ.

ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಡಯೆಟ್‌ ನಿಯಂತ್ರಕರು ಸೂಚಿಸಿದ ಎಲೆಗಳು, ಸಸ್ಯದ ವಿವಿಧ ಭಾಗಗಳಿಂದ ಲಭ್ಯವಾಗುತ್ತದೆ.

ಕಾಮುಕ ತಂದೆ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟ ವಿದ್ಯಾರ್ಥಿನಿ, ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ

ಸುಮಾರು ಎರಡು ತಿಂಗಳ ಲೈಫ್‌ ಡಯೆಟ್‌ ಪಾಲನೆ ಬಳಿಕ ಮೈಗ್ರೇನ್‌ ಗಣನೀಯವಾಗಿ ಕಡಿಮೆ ಆಗಲು ಶುರುವಾಯಿತು. ತಿಂಗಳಿಗೆ 18 ಬಾರಿ ಮಾತ್ರವೇ ಕಾಣಿಸಿಕೊಳ್ಳುತ್ತಿದೆ. ಅದು ಕೂಡ ಅತ್ಯಂತ ಕಡಿಮೆ ಅವಧಿ ಮಾತ್ರವೇ ಎಂದು ಮಾಜಿ ಫೋಟೊಗ್ರಾಫರ್‌ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ದೇಹದ ಬಂಧನದಿಂದ ಬಿಡುಗಡೆಯಾಗಿ ಹಾಯಾಗಿದ್ದೇನೆ. ಮುಂಚಿನಂತೆ ತಿಂಗಳು ಪೂರ್ತಿ ಮೈಗ್ರೇನ್‌ ಬಾಧೆಯಲ್ಲಿ ಅಥವಾ ಅದರಿಂದ ಚೇತರಿಕೆ ಕಾಣುವಲ್ಲಿ ಕಳೆಯುವ ಕೆಟ್ಟ ಕಾಲ ದೂರವಾಗುತ್ತಿದೆ ಎಂದು ಮಾಧ್ಯಮವೊಂದರ ಜತೆಗೆ ಲೈಫ್‌ ಡಯೆಟ್‌ನ ಲಾಭಗಳ ಬಗ್ಗೆ ವೃದ್ಧರು ಸಂತಸ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...