alex Certify ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಸೊಳ್ಳೆ ಓಡಿಸಲು ಮಹಿಳೆ ಸೂಚಿಸಿದ ಉಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಸೊಳ್ಳೆ ಓಡಿಸಲು ಮಹಿಳೆ ಸೂಚಿಸಿದ ಉಪಾಯ

ಸೊಳ್ಳೆಗಳು ಅಂದ್ರೆ ಸಾಕು ಎಂಥವರೂ ಮೂಗು ಮುರಿಯುತ್ತಾರೆ. ನಿಮ್ಮ ನೆಮ್ಮದಿಯನ್ನ ಕ್ಷಣಮಾತ್ರದಲ್ಲೇ ಹಾಳು ಮಾಡುವ ಸಾಮರ್ಥ್ಯ ಈ ಸೊಳ್ಳೆಗಳಿಗಿದೆ. ಇದು ಮಾತ್ರವಲ್ಲದೇ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ, ಚಿಕುನ್​ ಗುನ್ಯಾ, ಮಲೇರಿಯಾದಂತಹ ಭಯಾನಕ ಖಾಯಿಲೆಗಳೂ ವಕ್ಕರಿಸಿಕೊಳ್ಳೋದ್ರಿಂದ ಸೊಳ್ಳೆಗಳಿಂದ ಎಚ್ಚರವಾಗಿದ್ದಷ್ಟೂ ಒಳ್ಳೆಯದೆ.

ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಮಾರ್ಕೆಟ್​ನಲ್ಲಿ ನಾನಾ ಬಗೆಯ ಅಸ್ತ್ರಗಳು ಲಭ್ಯವಿದೆ. ಈ ಎಲ್ಲದರ ನಡುವೆ ಟ್ವಿಟರ್​ ಬಳಕೆದಾರರೊಬ್ಬರು ಉಪ್ಪು ಹಾಗೂ ಟಕೀಲಾ ಬಳಸಿ ಸೊಳ್ಳೆಗಳನ್ನ ಹೇಗೆ ಹೊಡೆದೋಡಿಸಬಹುದು ಎಂಬ ಮಾಸ್ಟರ್​ ಪ್ಲಾನ್​ ಒಂದನ್ನ ಕಂಡು ಹಿಡಿದಿದ್ದಾರೆ.

BREAKING: ಕೊರೋನಾಗೆ ಕಡಿವಾಣ ಹಾಕಲು ಮತ್ತೊಂದು ಅಸ್ತ್ರ ರೆಡಿ

ಈ ಮಹಿಳೆ ಹೊಸ ಪ್ಲಾನ್​ನ್ನು ಈ ರೀತಿ ವಿವರಿಸಿದ್ದಾರೆ : ಸೊಳ್ಳೆಯು ಸಕ್ಕರೆ ಎಂದುಕೊಂಡು ಉಪ್ಪಿನ ಮೇಲೆ ಕುಳಿತುಕೊಳ್ಳುತ್ತದೆ. ಉಪ್ಪು ದೇಹಕ್ಕೆ ಹೋದ ಬಳಿಕ ಅದಕ್ಕೆ ಬಾಯಾರಿಕೆಯಾಗುತ್ತೆ. ಆಗ ನೀರು ಎಂದುಕೊಂಡು ಟಕೀಲಾವನ್ನ ಸೇವನೆ ಮಾಡುತ್ತದೆ. ಎಣ್ಣೆ ಸೇವನೆ ಮಾಡಿದ ಬಳಿಕ ಅದಕ್ಕೆ ತಲೆತಿರುಗಲು ಆರಂಭವಾಗುತ್ತದೆ ಹಾಗೂ ಅದು ಹತ್ತಿರದಲ್ಲೇ ಇರುವ ಕಲ್ಲಿಗೆ ತಲೆ ಬಡಿದುಕೊಂಡು ಸತ್ತೇ ಹೋಗುತ್ತೆ ಎಂದು ಬರೆದಿದ್ದಾರೆ. ಈ ಟ್ವೀಟ್​ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

— Judianna (@Judianna) June 25, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...