ಬಿಹಾರದಲ್ಲಿ ಅಂಗಡಿಯೊಂದನ್ನು ನಡೆಸುವ ಬಿಂದೇಶ್ವರ್ ಶಾ ಅವರ ಪುತ್ರ ಓಂ ಪ್ರಕಾಶ್ ಗುಪ್ತಾ ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 64ನೇ ರ‍್ಯಾಂಕ್ ಪಡೆದು, ಸಾಧಿಸಬೇಕೆಂಬ ಮಂದಿಗೆ ಹೊಸ ಸ್ಪೂರ್ತಿಯಾಗಿದ್ದಾರೆ.
ಜೂನ್ 6ರಂದು ಪ್ರಕಟಗೊಂಡ ಫಲಿತಾಂಶದಲ್ಲಿ, 1454 ಯಶಸ್ವಿ ಅಭ್ಯರ್ಥಿಗಳ ಪೈಕಿ ಈತ ಸಹ ಒಬ್ಬರಾಗಿದ್ದಾರೆ.
ಮನಸಿಗೆ ಮುದ ನೀಡುತ್ತೆ ಪಾಕ್ ವೈದ್ಯೆಯ ಕಂಠಸಿರಿ..!
ಮಧ್ಯಮ ವರ್ಗದ ಕುಟುಂಬದ ಓಂ, ಐಐಟಿ-ರೂರ್ಕಿಯಲ್ಲಿ ಬಿಟೆಕ್ ಪದವಿ ಪೂರೈಸಿದ್ದಾರೆ. ಪಟನಾದ ಫತುಹಾದ ಸೊನಾರು ಗ್ರಾಮದ ವಾಸಿಯಾಗಿದ್ದಾರೆ ಓಂ.
ಯುವಕನಿಗೆ ಒಲಿದುಬಂದ 14 ಸರ್ಕಾರಿ ಹುದ್ದೆ…!
“ಯುಪಿಎಸ್‌ಸಿ ಹಾಗೂ ಬಿಪಿಎಸ್‌ಸಿ ಪರೀಕ್ಷೆಗಳಿಗೆಂದು ನಾನು ಪ್ರತಿನಿತ್ಯ ಆರು ಗಂಟೆಗಳ ಅಧ್ಯಯನ ನಡೆಸುತ್ತಿದ್ದೆ. ಇದರೊಂದಿಗೆ ನನ್ನ ಜೀವನೋಪಾಯಕ್ಕಾಗಿ ಟ್ಯೂಷನ್ ನಡೆಸುತ್ತಿದ್ದೆ” ಎಂದು ತಮ್ಮ ಪರಿಶ್ರಮದ ಪರಿಯನ್ನು ವಿವರಿಸಿದ್ದಾರೆ ಓಂ.
ಖಾಸಗಿ ಕಂಪನಿಗಳಿಂದ ಅನೇಕ ಆಫರ್‌ಗಳು ಬಂದರೂ ಸಹ ಆಡಳಿತ ಸೇವೆಗಳಲ್ಲಿ ಕೆಲಸ ಮಾಡಬೇಕೆಂಬ ಇರಾದೆಯಿಂದ ಅವೆಲ್ಲವನ್ನೂ ತಿರಸ್ಕರಿಸಿರುವ ಓಂ, ಯುಪಿಎಸ್‌ಸಿಯ ಮುಖ್ಯ ಪರೀಕ್ಷೆಯಲ್ಲೂ ತೇರ್ಗಡೆಯಾಗಿದ್ದಾರೆ.