alex Certify ಸರ್ಕಾರಿ ಆಸ್ಪತ್ರೆಯಲ್ಲಿ ಇದೆಂತಾ ದುಃಸ್ಥಿತಿ..? ಹಾಳೆ ಮೇಲೆ ಎಕ್ಸ್​ ರೇ ವರದಿ ಮುದ್ರಣ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಆಸ್ಪತ್ರೆಯಲ್ಲಿ ಇದೆಂತಾ ದುಃಸ್ಥಿತಿ..? ಹಾಳೆ ಮೇಲೆ ಎಕ್ಸ್​ ರೇ ವರದಿ ಮುದ್ರಣ..!

ಹಣದ ಕೊರತೆಯಿಂದಾಗಿ ಎಕ್ಸ್​ ರೇ ವರದಿಯನ್ನು ತಮಿಳುನಾಡಿನ ಕೋವಿಲಪಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಬಿಳಿ ಹಾಳೆಯ ಮೇಲೆ ಪ್ರಿಂಟ್​ ಮಾಡಲಾಗಿದೆ. ಫಿಲ್ಮ್ಸಂ ದರ ದುಬಾರಿಯಾದ ಹಿನ್ನೆಲೆ ಈ ರೀತಿ ಮಾಡಬೇಕಾಯ್ತು ಎಂದು ಸರ್ಕಾರಿ ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.

ಕಳೆದ 1 ತಿಂಗಳಿನಿಂದ ಇದೇ ರೀತಿ ಬಿಳಿ ಹಾಳೆಯ ಮೇಲೆ ಎಕ್ಸ್​ ರೇ ವರದಿ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಈ ರೀತಿ ಮಾಡೋದ್ರಿಂದ ನಮಗೆ ಬೇರೆ ವೈದ್ಯರ ಬಳಿ ನಮಗಿರುವ ಸಮಸ್ಯೆಯ ಬಗ್ಗೆ ಪರ್ಯಾಯ ಅಭಿಪ್ರಾಯ ಪಡೆಯಲೂ ಸಾಧ್ಯವಾಗ್ತಿಲ್ಲ ಎಂದು ಹೇಳಿದ್ದಾರೆ.

ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ತೂತಕುಡಿ ಮೆಡಿಕಲ್​ ಆಸ್ಪತ್ರೆ ಡೀನ್​​ ಡಾ. ನೆಹ್ರು, ಎಕ್ಸ್​ ರೇಯನ್ನು ಕಾಗದದ ಮೇಲೆ ಪ್ರಿಂಟ್​ ಮಾಡೋದ್ರಿಂದ ಯಾವುದೇ ಸಮಸ್ಯೆ ಆಗೋದಿಲ್ಲ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಮೆಡಿಕಲ್​​ ಸೂಪರಿಟೆಂಡೆಂಟ್​​ ಡಾ. ಕಮಲವಾಸನ್, ಕಳೆದ ಕೆಲ ವಾರಗಳಿಂದ ಫಿಲ್ಲ್ಸಂಗಳು ಲಭ್ಯವಿಲ್ಲ. ಹೀಗಾಗಿ ಕಾಗದದ ಮೇಲೆ ಎಕ್ಸ್​ ರೇ ವರದಿ ನೀಡುವುದು ಅನಿವಾರ್ಯವಾಗಿದೆ. ಆದರೆ ಬಿಳಿ ಹಾಳೆಯ ಮೇಲೆ ಎಕ್ಸ್​ ರೇಗಳನ್ನು ಮುದ್ರಿಸಿದ್ರೆ ಗುಣಮಟ್ಟದ ಕೊರತೆ ಉಂಟಾಗುತ್ತದೆ ಎಂದು ಹೇಳಿದ್ರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...