alex Certify ಕ್ಷುದ್ರಗ್ರಹಗಳ ಪತ್ತೆ ಮಾಡಲು ನಾಸಾಗೆ ನೆರವಾದ ಎಂಟರ ಬಾಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಷುದ್ರಗ್ರಹಗಳ ಪತ್ತೆ ಮಾಡಲು ನಾಸಾಗೆ ನೆರವಾದ ಎಂಟರ ಬಾಲೆ

This Eight-year-old From Brazil Has Helped NASA Find Seven Asteroids

ಬ್ರೆಜಿಲ್‌ನ ಅಲಾಗೋಸ್‌ನ ಎಂಟು ವರ್ಷದ ಬಾಲೆ ನಿಕೋಲ್ ಒಲಿವೆರಿಯಾಳ ಬಾಹ್ಯಾಕಾಶ ಪ್ರೀತಿ ಅದ್ಯಾವ ಮಟ್ಟಿಗೆ ಇದೆಯೆಂದರೆ; ತನ್ನ ಎರಡನೇ ವರ್ಷದಲ್ಲೇ ತಾಯಿಯಿಂದ ನಕ್ಷತ್ರಗಳ ಬಗ್ಗೆ ತಿಳಿಯಲು ಆರಂಭಿಸಿದ ಈ ಬಾಲೆ ಅಮೆರಿಕದ ನಾಸಾಗೆ ಏಳು ಕ್ಷುದ್ರ ಗ್ರಹಗಳನ್ನು ಪತ್ತೆ ಮಾಡಲು ನೆರವಾಗಿದ್ದಾಳೆ.

ಬ್ರೆಜಿಲ್‌ನ ಆರ್‌7 ಮಾಧ್ಯಮದ ಜಾಲತಾಣದ ಪ್ರಕಾರ, ಒಲಿವೆರಿಯಾ ನಾಸಾ ಸದಸ್ಯತ್ವದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಪತ್ತೆ ಸಮೂಹ ನಡೆಸುವ ಸಾರ್ವಜನಿಕ ವಿಜ್ಞಾನ ಕಾರ್ಯಕ್ರಮದ ಮೂಲಕ ಕ್ಷುದ್ರ ಗ್ರಹಗಳ ಪತ್ತೆಗೆ ನೆರವಾಗಿದ್ದಾಳೆ.

SHOCKING: ಲಸಿಕೆಯ ಎರಡು ಡೋಸ್ ತೆಗೆದುಕೊಂಡ್ರೂ ಬರ್ತಿದೆ ಡೆಲ್ಟಾ ವೇರಿಯಂಟ್

ಕಳೆದ ತಿಂಗಳು ಬ್ರೆಜಿಲ್‌ನ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ಸಚಿವಾಲಯವು ಬಾಹ್ಯಾಕಾಶ ಹಾಗೂ ಕ್ಷುದ್ರ ಗ್ರಹಗಳ ಬಗ್ಗೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸೆಮಿನಾರ್‌ನಲ್ಲಿ ಭಾಗವಹಿಸಲು ಈ ಬಾಲೆಗೆ ಆಹ್ವಾನ ನೀಡಲಾಗಿತ್ತು.

ತನ್ನ ಊರು ಮೆಸೆಯೋನಲ್ಲಿ ಶಾಲೆಗಳಲ್ಲಿ ಬಾಹ್ಯಾಕಾಶಗಳ ಕುರಿತಂತೆ ಲೆಕ್ಚರ್‌ ಕೊಡುವ ಒಲಿವೆರಾ ತನ್ನ ಆರನೇ ವಯಸ್ಸಿನಿಂದಲೇ ಬಾಹ್ಯಾಕಾಶದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಅನೇಕ ಸಂಶೋಧನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ ಬಂದಿದ್ದಾಳೆ.

Here is Nicole Oliveira de Lima Semião and her parents , Zilma Janacá Oliveira de Lima Semião and Jean Carlo Lessa…

Posted by International Astronomical Search Collaboration on Wednesday, January 20, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...