alex Certify ʼಟೊಮ್ಯಾಟೋ ಫ್ರೈʼ; ಹೀಗೊಂದು ಸ್ಪೆಷಲ್ ಚಾಟ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಟೊಮ್ಯಾಟೋ ಫ್ರೈʼ; ಹೀಗೊಂದು ಸ್ಪೆಷಲ್ ಚಾಟ್‌

ಥರಾವರಿ ತಿನ್ನೋದ್ರಲ್ಲಿ ಭಾರತೀಯರದ್ದು ಎತ್ತಿದ ಕೈ ಎಂದು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ? ದೇಶಾದ್ಯಂತ ಸಿಗುವ ಬಗೆಬಗೆಯ ಭಕ್ಷ್ಯಗಳನ್ನು ತಿನ್ನಲು ನಮಗೆ ನಮ್ಮ ಇಡೀ ಜೀವಮಾನವೇ ಸಾಲೋದಿಲ್ಲ.

ಅದರಲ್ಲಿ ಎಲ್ಲಾ ರುಚಿಗಳನ್ನೂ ತನ್ನೊಳಗೆ ಹೊಂದಿರುವ ಚಾಟ್‌ ಎಂದರೆ ಆಬಾಲವೃದ್ಧರವರೆಗೂ ಇಷ್ಟ ಪಡುತ್ತಾರೆ. ಸಿಹಿ, ಮಸಾಲೆ, ಹುಳಿ ಮತ್ತು ಉಪ್ಪುಪ್ಪು ಎಲ್ಲಾ ರುಚಿಗಳನ್ನು ಹೊಂದಿರುವ ಚಾಟ್‌‌ನಲ್ಲಿ ನೂರಾರು ಥರ ಇವೆ.

ಪೂರ್ವ ದೆಹಲಿಯ ಬೀದಿ ಬದಿಯ ಚಾಟ್‌ ವರ್ತಕರೊಬ್ಬರು ಚಾಟ್‌ ಐಟಂಗಳ ಪಟ್ಟಿಗೆ ಹೊಸ ಖಾದ್ಯ ಸೇರಿಸಿದ್ದಾರೆ. ’ಟೊಮ್ಯಾಟೋ ಚಾಟ್‌’ ಹೆಸರಿನ ಈ ತಿಂಡಿ ಬಗ್ಗೆ ನೆಟ್ಟಿಗರು ಮಾತನಾಡುತ್ತಿದ್ದಾರೆ.

ಮುತ್ತಿಕ್ಕುವಾಗ ಕಣ್ಮುಚ್ಚಿಕೊಳ್ಳುವುದೇಕೆ ಗೊತ್ತಾ…..?

ಇನ್‌ಸ್ಟಾಗ್ರಾಂನಲ್ಲಿ ಫುಡ್‌ ವ್ಲಾಗಿಂಗ್ ಮಾಡುವ ’ಚಾಟೋರೆ ಬ್ರದರ್ಸ್’ ಈ ಚಾಟ್‌ನ ಸಿದ್ಧತೆಯ ವಿಡಿಯೋ ಶೇರ್‌ ಮಾಡಿಕೊಂಡಿದೆ. ಸುಡುವ ಮರಳಿನಲ್ಲಿ ಟೊಮ್ಯಾಟೋಗಳನ್ನು ಬೇಯಿಸಿ, ಮಿನರಲ್ ನೀರಿನಿಂದ ಅದನ್ನು ತೊಳೆದು, ಸಿಪ್ಪೆ ತೆಗೆಯುವ ವರ್ತಕ, ಅವುಗಳನ್ನು ಕತ್ತರಿಸಿ ಎಲೆಗಳು ಹಾಗೂ ಮಸಾಲೆಗಳನ್ನು ಮೇಲೆ ಉದುರಿಸಿ, ಚಮಚೆಯಷ್ಟು ಸಾಸ್‌ನೊಂದಿಗೆ ಸರ್ವ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಶೇರ್‌ ಮಾಡಿದ ಬಳಿಕ ಈ ವಿಡಿಯೋವನ್ನು 16 ಲಕ್ಷ ಮಂದಿ ವೀಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...