alex Certify ಮಹಿಂದ್ರಾದ ಈ ಥಾರ್‌ನಲ್ಲಿದೆ ಕಸ್ಟಮೈಸ್ಡ್‌ ಮಾರ್ಪಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಂದ್ರಾದ ಈ ಥಾರ್‌ನಲ್ಲಿದೆ ಕಸ್ಟಮೈಸ್ಡ್‌ ಮಾರ್ಪಾಡು

ಭಾರತೀಯ ಮಾರುಕಟ್ಟೆಯಲ್ಲಿರುವ ಅತ್ಯಂತ ಯಶಸ್ವಿ 4×4 ಎಸ್‌ಯುವಿಗಳಲ್ಲಿ ಒಂದು ಮಹಿಂದ್ರಾ ಥಾರ್‌. ಈ ಎಸ್‌ಯುವಿ ಖರೀದಿ ಮಾಡಬೇಕಾದರೆ ಒಂದು ವರ್ಷದ ಮಟ್ಟಿಗೆ ಕಾಯಬೇಕಾಗಿ ಬರಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಸಿಗುವ ಎಸ್‌ಯುವಿಯಾದ ಥಾರ್‌ಗೆ ಆ ಮಟ್ಟದ ಬೇಡಿಕೆ ಇದೆ.

ಮಹಿಂದ್ರಾ ಥಾರ್‌ನ ಮಾಡಿಫೈಡ್ ಅವತಾರಗಳು ಮಾರುಕಟ್ಟೆಯಲ್ಲಿ ಬಹಳಷ್ಟು ಲಭ್ಯವಿವೆ. ಆದರೆ ಹಾರ್ಡ್‌ಟಾಪ್‌ನೊಂದಿಗೆ ಬಿಳಿಯ ಬಣ್ಣ ಹಾಗು ಕೆಂಪು ಬಣ್ಣದ ಒಳಾಂಗಣ ಹೊಂದಿರುವ ಈ ಎಸ್‌ಯುವಿ ಬೇರೆಯದ್ದೇ ಮಟ್ಟದಲ್ಲಿದೆ.

ಎಸ್‌ಯುವಿಯ ಮುಂಬದಿ ಬಂಪರ್‌ ಅನ್ನು ಆಫ್‌ರೋಡ್ ಬಂಪರ್‌ನಿಂದ ರೀಪ್ಲೇಸ್ ಮಾಡಲಾಗಿದ್ದು, ಜೊತೆಗೆ ಎಲ್‌ಇಡಿ ಮಂಜಿನ ದೀಪಗಳು, ಸ್ಟಾಕ್ ಹೆಡ್‌ಲ್ಯಾಂಪ್‌ಗಳ ಬದಲಿಗೆ ಡಿಆರ್‌ಎಲ್‌ಗಳೊಂದಿಗೆ ಲೀಡ್ ಪ್ರಾಜೆಕ್ಟರ್‌ ಘಟಕಗಳನ್ನು ಅಳವಡಿಸಲಾಗಿದೆ.

ONGC ಯಲ್ಲಿ ಉದ್ಯೋಗಾವಕಾಶ: ಅರ್ಜಿ ಸಲ್ಲಿಸುವ ಕುರಿತು ಇಲ್ಲಿದೆ ಡಿಟೇಲ್ಸ್

18 ಇಂಚಿನ ಬಹುಲೋಹೀಯ ಚಕ್ರಗಳು ಹಾಗೂ ಲೋ ಪ್ರೊಫೈಲ್ ಚಕ್ರಗಳನ್ನು ಹೊಂದಿರುವ ಈ ಥಾರ್‌, ಎಲ್‌ಇಡಿ ರಿಫ್ಲೆಕ್ಟರ್‌ ಟೇಲ್‌ ಲ್ಯಾಂಪ್‌ಗಳು ಮತ್ತು ಮರ್ಸಿಡಿಸ್ ಬೆಂಜ಼್‌‌ ಜಿ-ವ್ಯಾಗನ್‌ ಸ್ಟೈಲ್‌ನ ಚಕ್ರದ ಕವರ್‌ಗಳನ್ನು ಹೊಂದಿದೆ.

ಒಳಾಂಗಣದಲ್ಲಿ ಕೆಂಪು ಚೆರ‍್ರಿ ಫಿನಿಶಿಂಗ್‌ ಇದ್ದು, ಸನ್‌ರೂಫ್‌ ಒಂದನ್ನು ಸಹ ನೀಡಲಾಗಿದೆ.

ಮಹಿಂದ್ರಾ ಥಾರ್‌ನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಎರಡೂ ವರ್ಶನ್‌ಗಳು ಸಿಗಲಿದೆ. ಪೆಟ್ರೋಲ್ ಇಂಜಿನ್ 150ಬಿಚ್‌ಪಿ ಮತ್ತು 320ಎನ್‌ಎಂ ಟಾರ್ಕ್ ಶಕ್ತಿ ಉತ್ಪಾದಿಸಿದರೆ, ಡೀಸೆಲ್ ಇಂಜಿನ್‌ನಿಂದ 130 ಬಿಎಚ್‌ಪಿ ಮತ್ತು 320ಎನ್‌ಎಂ ಟಾರ್ಕ್‌ನಷ್ಟು ಬಲ ಉತ್ಪಾದನೆಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...