ಭಾರತವು ಬಹುತೇಕ “ಜುಗಾಡ್” ಪ್ರಿಯರ ದೇಶವಾಗಿದೆ. ಜನರು ಹಲವಾರು ರೀತಿಯಲ್ಲಿ ಬುದ್ಧಿ ಉಪಯೋಗಿಸಿ ವಿಧವಿಧ ರೀತಿಯಲ್ಲಿ ಜುಗಾಡ್ ಸೃಷ್ಟಿಸುತ್ತಾರೆ.
ಅಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದೆ. ಇದು ಆಟೋರಿಕ್ಷಾಕ್ಕೆ ಸಂಬಂಧಿಸಿದ ವಿಡಿಯೋ ಆಗಿದೆ. ಈ ವಿಡಿಯೋದಲ್ಲಿ ಪ್ರಕಾಶಮಾನವಾದ ಗುಲಾಬಿ ಬಣ್ಣದ ಆಟೋ ರಿಕ್ಷಾದ ಪಕ್ಕದಲ್ಲಿ ವ್ಯಕ್ತಿಯೊಬ್ಬ ನಿಂತಿರುವುದನ್ನು ತೋರಿಸುತ್ತದೆ. ವಾಹನದ ಹೊರಭಾಗವು ಗುಲಾಬಿ ಬಣ್ಣದ್ದಾಗಿದ್ದರೆ, ಒಳಭಾಗವು ಬಿಳಿಯ ಬಣ್ಣ ಹೊಂದಿದೆ.
ಆ ವ್ಯಕ್ತಿ ಆಟೋದೊಳಗೆ ಕೆಲವು ಬಟನ್ ಅಳವಡಿಸಿದ್ದಾನೆ. ಯಾವುದೋ ಬಟನ್ ಒತ್ತಿದರೆ ಕನ್ವರ್ಟಿಬಲ್ ಕಾರಿನಲ್ಲಿರುವಂತೆಯೇ ಆಟೋದ ಮೇಲ್ಛಾವಣಿಯು ತೆರೆದುಕೊಳ್ಳುತ್ತದೆ, ಇನ್ನೊಂದು ಬಟನ್ ಒತ್ತಿದಾಗ ಅದು ಹಿಂದಕ್ಕೆ ಮಡಚಿಕೊಳ್ಳುತ್ತದೆ. ಅದರ ಸೀಟುಗಳೂ ಬೆಲೆಬಾಳುವಂತೆ ಕಾಣುತ್ತಿವೆ. ಅಷ್ಟೇ ಅಲ್ಲದೇ ಆಟೋ-ರಿಕ್ಷಾವು ವಿಶಿಷ್ಟವಾದ ಅಡ್ಡ ದೀಪಗಳನ್ನು ಹೊಂದಿದೆ, ಹಿಂಬದಿಯ ಕನ್ನಡಿಗಳ ಕೆಳಗೆ ಇರಿಸಲಾಗಿದೆ. ಇದನ್ನು ನೋಡಿ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.
https://youtu.be/lW-J4YQHGmA