ನಿಮಗೆ ಹಾರರ್ ಸಿನಿಮಾ ನೋಡುವ ಹವ್ಯಾಸವಿದೆಯೇ..? ಹಾಗಿದ್ರೆ ಇಲ್ಲೊಂದು ಉತ್ತಮ ಅವಕಾಶ ನಿಮಗಿದೆ. ಅದಕ್ಕೆ ನೀವು ಮಾಡಬೇಕಿರುವುದು ಏನಂದ್ರೆ, ಕೇವಲ 10 ದಿನದಲ್ಲಿ 13 ಹಾರರ್ ಸಿನಿಮಾ ನೋಡಿ ಸಾಕು, ಭರ್ಜರಿ ಹಣ ನಿಮ್ಮ ಪಾಲಾಗುತ್ತೆ.
ಹೌದು, ಹಣಕಾಸು ಕಂಪನಿಯೊಂದು ಈ ಆಫರ್ ಘೋಷಿಸಿದೆ. 13 ಭಯಾನಕ ಸಿನಿಮಾಗಳನ್ನು ನೋಡಿದವರಿಗೆ ಈ ಕಂಪನಿಯು $ 1,300 ಅಂದರೆ 95,000 ರೂ. ಪಾವತಿಸುತ್ತದೆ ಎಂದು ಘೋಷಿಸಿದೆ.
ಚಲನಚಿತ್ರದ ಬಜೆಟ್ ಗಾತ್ರವು ವೀಕ್ಷಕರೊಂದಿಗೆ ಅದರ ಪರಿಣಾಮಕಾರಿತ್ವದ ಮೇಲೆ ಪ್ರಭಾವ ಬೀರುತ್ತದೆಯೇ ಎಂದು ಕಂಡುಹಿಡಿಯುವುದು ಇದರ ಉದ್ದೇಶವಾಗಿದೆ ಎಂದು ಹೇಳಲಾಗಿದೆ.
ಬಟ್ಟೆ ಮಾಸ್ಕ್ ಹಾಕ್ತೀರಾ….? ಹಾಗಿದ್ರೆ ಈ ಸುದ್ದಿ ಅವಶ್ಯಕವಾಗಿ ಓದಿ
ಇನ್ನು ದೆವ್ವದ ಸಿನಿಮಾಗಳ ಪಟ್ಟಿಯಲ್ಲಿ ಸಾ, ಅಮಿಟಿವಿಲ್ಲೆ ಹಾರರ್, ಎ ಕ್ವೈಟ್ ಪ್ಲೇಸ್, ಎ ಕ್ವೈಟ್ ಪ್ಲೇಸ್ ಪಾರ್ಟ್-2, ಕ್ಯಾಂಡಿಮನ್ ಮುಂತಾದವುಗಳು.
ಇದಕ್ಕಾಗಿ ಅರ್ಜಿಗಳನ್ನು ಸಲ್ಲಿಸುವವರು 26 ಸೆಪ್ಟೆಂಬರ್ 2021 ರೊಳಗೆ ಕಳುಹಿಸಬಹುದು. ಆದಾಗ್ಯೂ, ಇದು 18 ವರ್ಷಕ್ಕಿಂತ ಮೇಲ್ಪಟ್ಟ ಅಮೆರಿಕಾ ನಿವಾಸಿಗಳಿಗೆ ಮಾತ್ರ ಎಂದು ಹೇಳಲಾಗಿದೆ.