alex Certify ಮಾಯಿಶ್ಚರೈಸರ್‌ ನಂತೆ ಕೆಲಸ ಮಾಡುತ್ತೆ ತೆಂಗಿನೆಣ್ಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಯಿಶ್ಚರೈಸರ್‌ ನಂತೆ ಕೆಲಸ ಮಾಡುತ್ತೆ ತೆಂಗಿನೆಣ್ಣೆ

ತೆಂಗಿನೆಣ್ಣೆಯನ್ನು ತಲೆಗೆ ಹಚ್ಚಿದರೆ ಕೂದಲಿಗೆ ಒಳ್ಳೆಯದು, ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಇನ್ನು ಮೈಗೆ ಹಚ್ಚಿಕೊಂಡರಂತೂ ಯಾವ ಮಾಯಿಶ್ಚರೈಸರ್‌ ಮಾಡದ ಚಮತ್ಕಾರವನ್ನು ತೆಂಗಿನೆಣ್ಣೆ ಮಾಡುತ್ತದೆ.

ತ್ವಚೆ ಸಮಸ್ಯೆಗಂತೂ ಇದು ಅತ್ಯುತ್ತಮ ಮನೆಮದ್ದಾಗಿದೆ.

* ಒಣ ತ್ವಚೆಯೇ, ಹಾಗಿದ್ದಲ್ಲಿ ದಿನಾ ತೆಂಗಿನೆಣ್ಣೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ಒಣ ತ್ವಚೆಯ ಕಿರಿಕಿರಿಯಿಂದ ಪಾರಾಗಬಹುದು.

* ಮುಖದ ಮೇಕಪ್‌ ತೆಗೆಯಲು ತೆಂಗಿನೆಣ್ಣೆ ಬಳಸುವುದರಿಂದ ಎರಡು ಲಾಭ. ಒಂದು ಸುಲಭವಾಗಿ ಮೇಕಪ್‌ ತೆಗೆಯಬಹುದು ಹಾಗೇ ಮೇಕಪ್‌ ತ್ವಚೆ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಲಿಪ್ ಸ್ಟಿಕ್ ಬಣ್ಣ ಕೂಡ ಆರಾಮಾಗಿ ತೆಗೆಯಬಹುದು.

* ಮುಖದಲ್ಲಿ ಜಿಡ್ಡಿನಂಶವಿದ್ದರೆ ಮೊಡವೆ ಸಮಸ್ಯೆ ಸಾಮಾನ್ಯ. ಆದರೆ ತೆಂಗಿನೆಣ್ಣೆಯಿಂದ ದಿನಾ ಮಸಾಜ್ ಮಾಡಿದ್ರೆ ಮೊಡವೆ ಬರುವುದನ್ನು ತಡೆಯಬಹುದು ಹಾಗೂ ತ್ವಚೆಯೂ ಕೋಮಲವಾಗಿ ಇರುತ್ತದೆ.

* ಬಿಸಿಲಿಗೆ ಹೋಗುವ ಮುನ್ನ ಕೈ-ಕಾಲಿಗೆ ತೆಂಗಿನೆಣ್ಣೆ ಹಚ್ಚಿದರೆ, ಒಡೆದ ಚರ್ಮವನ್ನು ಮರೆ ಮಾಚಬಹುದು. ನೈಸರ್ಗಿಕವಾದ ಸನ್‌ ಸ್ಕ್ರೀನ್ ನಂತೆ ಇದು ಕೆಲಸ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...